ರೇವಪ್ಪಯ್ಯಾ ಸ್ವಾಮಿ ಜಾತ್ರಾ ಮಹೋತ್ಸವ : ವೈಭವದ ರಥೋತ್ಸವ

ಭಾಲ್ಕಿ :ಡಿ. 28 : ತಾಲೂಕಿನ ಸುಕ್ಷೇತ್ರ ನಾವದಗಿ ಗ್ರಾಮದ ಸದ್ಗುರು ರೇವಪ್ಪಯ್ಯಾ ಮಹಾಸ್ವಾಮಿಗಳ 84ನೇ ಜಾತ್ರಾ ಮಹೋತ್ಸವ ನಿಮಿತ್ಯ ಶುಕ್ರವಾರ ವೈಭವದ ರಥೋತ್ಸವ ಕಾರ್ಯಕ್ರಮ ನಡೆಯಿತು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಆಂದ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ, ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಸಂಜೆ ದೇವಸ್ಥಾನದ ಆವರಣದಿಂದ ಪಲ್ಲಕ್ಕಿ ಉತ್ಸವ ನಡೆಸಿ, ನಂತರ ಥೇರ ಮೈದಾದನಲ್ಲಿ ರಥಕ್ಕೆ ಪೂಜೆ ಸಲ್ಲಿಸಿ, ಉತ್ಸವ ಕಾರ್ಯಕ್ರಮ ನಡೆಸಲಾಯಿತು.

ನೂರಾರು ಭಕ್ತರು ಸದ್ಗುರು ರೇವಪ್ಪಯ್ಯಾ ಸ್ವಾಮಿ ಮಹಾರಾಜಕೀ ಜೈ ಎನ್ನುವ ಜಯಘೋಷ ದೊಂದಿಗೆ ರಥಕ್ಕೆ ಪೂಜೆ ನೆರವೇರಿಸಿದರು.

ರಥೋತ್ಸವದಲ್ಲಿ ಪ್ರಮುಖರಾದ ಶಾಂತವೀರ ಸ್ವಾಮಿ, ಮಲ್ಲಿಕಾರ್ಜುನ ಶೇರಿಕಾರ, ಜೈರಾಜ ಧಾಬಶೆಟ್ಟೆ, ಪ್ರದೀಪ ಪಾಟೀಲ, ರಾಜಶೇಖರ ಬಿರಾದಾರ, ಸೂರ್ಯಕಾಂತ ಬಿರಾದಾರ, ಶಿವರಾಜ ಪಾಟೀಲ ಮಾವಿನಹಳ್ಳಿ, ಬಾಬುರಾವ ಗುಡ್ಡಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಥೋತ್ಸವ ಕ್ಕಿಂತಲು ಮುಂಚೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು ಬರಿಗಾಲಲ್ಲಿ ಆರತಿ ಹಿಡಿದು ದೇವಸ್ಥಾನದಿಂದ ಥೇರ್ ಮೈದಾನದವರೆಗೆ ನಡೆದು ಭಕ್ತಿ ಭಾವ ಮೆರೆದರು. ಯುವಕರು ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು.