ರೇವಪ್ಪನ ಬಡಾವಣೆಗೆ ಅಧಿಕಾರಿಗಳ ಭೇಟಿ

(ಸಂಜೆವಾಣಿ ಫಲಶ್ರುತಿ)
ಇಂಡಿ: ಜು.12:ಪಟ್ಟಣದ ವಾರ್ಡ ನಂ 7 ರ ರೇವಪ್ಪನ ಬಡಾವಣೆಯ ನಿವಾಸಿಗಳು ಅನುಭವಿಸುತ್ತಿರುವ ನರಕಯಾತನೆ ಬಗ್ಗೆ ದಿನಾಂಕ 09/07/2022 ರಂದು ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅದನ್ನು ಅರಿತು ಕೂಡಲೇ ಕಂದಾಯ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೆ,ಎಸ್ ಲಕ್ಷ್ಮೇಶ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಮನೆ ಮನೆ ಭೇಟಿ ನೀಡಿ ತೊಂದರೆಗಳನ್ನು ಆಲಿಸಿದರು.
ನಿವಾಸಿಗರು ಕಳೆದ 25 ವರ್ಷಗಳಿಂದ ವಾಸಿಸುತ್ತೇವೆ. ಬಡಾವಣೆ ಪುರಸಭೆಗೆ ಒಳಪಟ್ಟಿದೆ. ಪುರಸಭೆಗೆ ಕರ ತುಂಬುತ್ತೇವೆ. ಆದರೆ ಬಡಾವಣೆಯಲ್ಲಿ ಮೂಲಭೂತ ಸೌಕರ್ಯದ ಕೊರೆತೆ ಇದೆ. ಕೊರತೆಯನ್ನು ನಿಗಿಸಿ ಎಂದು ವಿನಂತಿಸಿದರು.
ಅದಕ್ಕೆ ಸ್ಪಂದಿಸಿ ಬಡಾವಣೆಯಲ್ಲಿ ಎಲ್ಲ ಕಡೆಗೆ ವೀಕ್ಷಿಸಿದರು. ಬಡಾವಣೆಯಲ್ಲಿ ಉರ್ದುಪ್ರಾಥಮಿಕ ಶಾಲೆ ಮತ್ತು ಕನ್ನಡ ಪ್ರಾಥಮಿಕ ಶಾಲೆಗಳಿದ್ದು ಶಾಲೆಯ ಮುಂದೆ ನೀರು ನಿಂತಿದ್ದು ವಿದ್ಯಾರ್ಥಿಗಳಿಗೆ ತೊಂದರೆ ಆಗುವದನ್ನು ಗಮನಿಸಿದ ಸಾಹೇಬರು ಕೂಡಲೇ ಅಲ್ಲಿ ಗರ್ಸ ಮತ್ತು ಮುರುಮ ಹಾಕಲು ಪುರಸಭೆಯವರಿಗೆ ತಿಳಿಸಿದರು. ಚರಂಡಿ ನೀರು ಸರಿಯಾಗಿ ಹೋಗಲು ವ್ಯವಸ್ಥೆ ಕಲ್ಪಿಸಲು ಕೆಲಸ ಪ್ರಾರಂಭಿಸಲು ತಿಳಿಸಿದರು. ಅದಲ್ಲದೆ ಕಾರ್ಯ ಪ್ರಾರಂಭವಾಗುವವರೆಗೂ ಅಲ್ಲಿಯೇ ಇದ್ದರು.
ಅದಲ್ಲದೆ ಇನ್ನಿತರ ಸೌಲಭ್ಯಗಳನ್ನು ಕೂಡಲೇ ಪರಿಹರಿಸುವದಾಗಿ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಲಕ್ಷ್ಮೀಶ,ಪುರಸಭೆ ಸಿಬ್ಬಂದಿ ಶಿವಶರಣ ಹುಚ್ಚಪ್ಪ , ಬಡಾವಣೆ ನಿವಾಸಿಗಳು ಮತ್ತಿತರಿದ್ದರು.