ರೇವಣಸಿದ್ದ ಶಿವಶರಣರ 74ನೇ ಪುಣ್ಯಸ್ಮರಣೋತ್ಸವ

Oplus_0

ಕಲಬುರಗಿ,ಮೇ.19-ಸ್ಥಳೀಯ ನೇಕಾರ ವಕೀಲರ ಬಳಗದ ವತಿಯಿಂದ ರೇವಣಸಿದ್ದ ಶಿವಶರಣರ 74ನೇ ಪುಣ್ಯಸ್ಮರಣೋತ್ಸವವನ್ನು ಸದ್ಗುರು ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಕಚೇರಿಯಲ್ಲಿ ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಶಿವಲಿಂಗಪ್ಪಾ ಅಷ್ಟಗಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತೊಗಟವೀರ ಕ್ಷತ್ರೀಯ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ ಮಾತನಾಡಿ, ಶತಮಾನದ ಹಿಂದೆಯೇ ಜಾತಿ ತಾರತಮ್ಯ ಹೋಗಲಾಡಿಸಲು ಕಾನೂನಾತ್ಮಕ ಹೋರಾಟ ಮಾಡಿ, ಎಲ್ಲರಿಗೂ ದೀಕ್ಷಾ ಐತನವ ಹಕ್ಕು ನೀಡಿದ ಮಹಾ ಸ್ವಾಮಿಗಳ ಪುಣ್ಯ ದಿನದಂದು ಪೂಜೆ ಸಲ್ಲಿಸುವ ಭಾಗ್ಯ ನನಗೆ ದೊರೆತಿದೆ ಅದುವೇ ಪುಣ್ಯ ಎಂದರು. ಕೊನೆಯಲ್ಲಿ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಅವರು, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ವಂದಿಸಿದರು. 1963-64 ರಲ್ಲಿ ಮುದ್ರಣಗೊಂಡ ಅಪರೂಪದ ಕೃತಿಗಳು ಮರು ಮುದ್ರಣ ಗೊಳಿಸಲು ಸಂಸ್ಥೆ ನಿರ್ಧರಿಸಿದೆ, ಕಾರಣ ಭಕ್ತರು ಹೆಚ್ಚಿನ ರೀತಿಯಲ್ಲಿ ಮುಂದೆ ಬಂದು ಧನ ಸಹಾಯ ನೀಡಿದರೆ, ಮರು ಮುದ್ರಣ ಮಾಡಿ ಪ್ರತಿ ಮನೆಗೂ ತಲುಪಿಸಿವ ಹೊಣೆ ನಮ್ಮ ಸಂಸ್ಥೆದಾಗಿದೆ ಮತ್ತು ಸಕಾರ ಗೊಳಿಸಲು ಶ್ರಮಿಸಲಿದೆ ಎಂದು ತಿಳಿಸಿದರು.