
(ಸಂಜೆವಾಣಿ ವಾರ್ತೆ)
ಚಿಟುಗುಪ್ಪ :ಮಾ.6: ಚಿಟುಗುಪ್ಪ ತಾಲೂಕಿನಲ್ಲಿ ಬರುವ ಬೆಳಕೇರಾ ಬೆಟ್ಟದ ರೇವಣಸಿದ್ದೇಶ್ವರ ರಥೋತ್ಸವ ನಿನ್ನೆ ಸಾಯಂಕಾಲ ಸುತ್ತಮುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಹೆಚ್ಚು ಗ್ರಾಮೀಣ ಭಕ್ತರು ಆಗಮಿಸಿ ಭಕ್ತರು ರಥದ ಮೇಲೆ. ನಾಣ್ಯ. ಉತ್ತತ್ತಿ. ನಾರು. ಬಾಳೆಹಣ್ಣು. ಹೂ ಹೂವ ಎಸೆದು ಕೈಮುಗಿದು ನಮಸ್ಕರಿಸಿ ತಮ್ಮ ಭಕ್ತಿ ಅರ್ಪಿಸಿದರು ಜಾತ್ರಾ ನಿಮಿತ್ಯವಾಗಿ ಬೆಳಕೇರಾ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ. ಉಜ್ಜಾಯಿ ಮೆರವಣಿಗೆ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ.ರಂಗು ರಂಗಿನ ಹೂಗಳಿಂದ ಅಲಂಕರಿಸಿದ ರಥವನ್ನು ಎಳೆಯುವ ಮೂಲಕ ಸಾವಿರಾರು ಭಕ್ತರು ಶ್ರೀ ರೇವಣಸಿದ್ದೇಶ್ವರ ಮಹಾರಾಜಕೀ ಜಯ್ ವಾಗಲಿ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಜಯ ಘೋಷಣೆಯೊಂದಿಗೆ ಸಡಗರ ಸಂಭ್ರಮದಿಂದ ರಥವನ್ನು ಎಳೆದರು. ಸ್ವಾಮೀಜಿಗಳ ಉಪಸ್ಥಿ. ಶ್ರೀ ಗಂಗಾಧರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಲಾಡಿಗೇರ. ಶ್ರೀ ಅಭಿನವ ಶರಣ ಶಂಕರ್ ಲಿಂಗ ಮಹಾರಾಜರು ಸ್ವಂತ ಆಶ್ರಮ. ಷ. ಬ್ರ. ಗುರುಲಿಂಗ ಶಿವಾಚಾರ್ಯರು ಅಯ್ಯಪ್ಪ ಸ್ವಾಮಿ ಮಠ ಚಿಟಗುಪ್ಪ ಹಾಗೂ ಚಾಂಗ್ಲೆರಾ. ಶಂಕ್ರಯ್ಯ ಮಹಾಸ್ವಾಮಿಗಳು ಮಾವಿನಹಳ್ಳಿ. ಸ್ವಾಮಿಗಳ ಸಮ್ಮುಖದಲ್ಲಿ ಸಂಜೆವಾಣಿಯ ದಿನಪತ್ರಿಕೆ ಕ್ಯಾಲೆಂಡರನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಬೆಳಕೇರ ಗ್ರಾಮ ಪಂಚಾಯತ್ ಅಧ್ಯಕ್ಷ ಮಾಣಿಕಪ್ಪ ಹಿಪ್ಪರಗಿ. ಉತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಪೆÇಲೀಸ್ಪಾಟೀಲ್. ಹುಮ್ನಾಬಾದ್ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಲಿಂಗಪ್ಪ ಪಾಟೀಲ್ ಬೆಳಕೇರ. ಬಿ.ಎಸ್.ಎಸ್.ಕೆ. ಸದಸ್ಯರಾದ ಮಲ್ಲಿಕಾರ್ಜುನ್ ಪಾಟಿಲ್. ತಾಲೂಕ ಪಂಚಾಯತ್ ಹುಮ್ನಾಬಾದ್ ಮಾಜಿ ಸದಸ್ಯರಾದ ನಾಗೇಶ್ ಕಲ್ಲೂರು. ಗ್ರಾಮ ಪಂಚಾಯತ್ ಸದಸ್ಯ ಮಲ್ಲಪ್ಪ ದಶಗೊಂಡ್. ಪಿ.ಕೆ.ಪಿ.ಎಸ್. ಮಾಜಿ ಅಧ್ಯಕ್ಷರಾದ ರಾಜಕುಮಾರ್ ಮಾಲಿ ಪಾಟೀಲ್. ಎಲ್.ಐ.ಸಿ. ಶಿವಕುಮಾರ್ ಮಾಲಿ ಪಾಟೀಲ್. ಹಿರಿಯ ನ್ಯಾಯವಾದಿ ರವಿಕಾಂತ್ ಹೂಗಾರ್. ಬೀಗೊರ್ಂಡ್. ಚಂದ್ರಶೇಖರ್ ನಾರಾಯಣಪೇಟ್. ಸಂಜು ಕುಮಾರ್ ಗೌಡಪ್ನೂರ್. ಜೆ.ಡಿ.ಎಸ್ ಮುಖಂಡ ಸಲೀಂ ಪಿಂಜಾರ್. ಜಗನಾಥ್ ರೆಡ್ಡಿ. ಉಮೇಶ್ ಹೂಗಾರ್.ಮಾರುತಿ ಈರಬಾಯಿ. ಖಾಸಯ್ಯಸ್ವಾಮಿ. ಶಿವಯ್ಯ ಜಡಗಿ. ತುಕರಾಮ ಅಣುಪಿನ್ನು. ಝರಯಪ್ಪ ಶೀತಳಗೇರಾ. ಅಮೃತ್ ಚಿಮ್ಕೋಡ್ ಸಾವಿರಾರು ಭಕ್ತರು ಉಪಸ್ಥಿತರಿದ್ದರು