ರೇವಣಸಿದ್ದೇಶ್ವರ ಏತ ನೀರಾವರಿಯಿಂದ 6500 ಹೆಕ್ಟೇರ್‍ಗೆ ನೀರು:ಪಾಟೀಲ

ಇಂಡಿ: ಡಿ.26:ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾಮಿಗಳು ಸುಮಾರು 640 ಈ ಪ್ರದೇಶಕ್ಕೆ ಅತ್ಯೆಂತ ಎತ್ತರವಾದ ಪ್ರದೇಶವಾದ ಸಾವಳಸಂಗ ಗುಡ್ಡದ ಮೇಲೆ ನೀರು ಹಾಯಿಸಬೇಕು ಇದರಿಂದ ಈ ಭಾಗದ ರೈತರಿಗೆ ನೀರಾವರಿ ಮಾಡಿದರೆ 2ನೇ ಕ್ಯಾಲೀಪೋರ್ನಿಯಾ ಆಗುತ್ತದೆ ಎಂಬ ಅವರ ಸದಾಶೇಯದಿಂದ ಪ್ರೇರಿತಗೊಂಡು
ಇಂದು ಈ ಭಾಗ ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಸಹಕಾರಗೊಳ್ಳುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಹೋರ್ತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪ ಕೃಷ್ಣಾ ಭಾಗ್ಯ ಜಲನಿಗಮ ನಿಯಮಿತ ಹೋರ್ತಿ -ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ಕಾರ್ಯನಿರ್ವಹಿಸುವ ಕಛೇರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸ್ರೀರೇವಣಸಿದ್ದೇಶ್ವರಯಾತ ನೀರಾವರಿಯಿಂದ ಚಡಚಣ.ಇಂಡಿ ಭಾಗದ ಸುಮಾರು 6500ಹೆಕ್ಟರ್ ಇದರಿಂದ ಇಂಡಿ -ನಾಗಠಾಣ ಮತಕ್ಷೇತ್ರದ ಒಟ್ಟು 42 ಹಳ್ಳಿಗಳಿಗೆ ನೀರಾವರಿ ಅನುಕೂಲವಾಗುತ್ತದೆ.
ಈ ಭಾಗ ನಿರಂತರ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ ಕುಡಿಯಲು ನೀರು ಇಲ್ಲದೆ ವ್ಯತ್ಯ ಪಡುವ ಪರಸ್ಥಿತಿಯಾಗಿದೆ. ಆಲಿಮಟ್ಟಿ ಕೃಷ್ಣಾ ನದಿಯ ಮೂಲಕ ಜಲಧಾರೆ ಯೋಜನೆಯಿಂದ ಕುಡಿಯುವ ನೀರಿನ ಶಾಶ್ವತ ಪರಿಹಾರ ಆಗಲಿದೆ.
ಕಾರ್ಯಾಲಯ ಮಾಡುವ ಉದ್ದೇಶ ನೀರಾವರಿ ಯಾವ ಹಂತದಲ್ಲಿದೆ ಯಾವ ವಿಧದಲ್ಲಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ರೈತಾಪಿ ವರ್ಗ ತಿಳಿದುಕೊಳ್ಳು ಕಛೇರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮುರಾರ್ಜಿ ವಸತಿ ಶಾಲೆಯ ಸಮೀಪ 2 ಎಕರೆ ಸರಕಾರದ ಭೂಮಿ ಇರುವದರಿಂದ ಕೆಬಿಜೆಎನ್‍ಎಲ್ ಕಛೇರಿ ಹಾಗೂ ಹೆಲಿಪ್ಯಾಡ್ ನಿಲ್ದಾಣ ನಿರ್ಮಿಸಿ ಶ್ರೀರೇವಣಸಿದ್ದೇಶ್ವರ ಪುಣ್ಯ ಸ್ಥಳ ಪ್ರಜ್ವಲಿಸುವಂತೆ ಮಾಡುತ್ತೇನೆ.
ವಿಧಾನ ಸಭೆಯ ಅಧಿವೇಶನದಲ್ಲಿ ಇಂಡಿ ಜಿಲ್ಲೆಯಾಗಿಸಬೇಕು ಎಂದು ನಾನು ಸರಕಾರಕ್ಕೆ ಮುಖ್ಯ ಮಂತ್ರಿಗಳಿಗೆ ಬೇಡಿಕೆ ಇಟ್ಟಿರುವೆ ಈ ನನ್ನ ಬೇಡಿಕೆಗೆ ಮುಖ್ಯ ಮಂತ್ರಿಗಳು ಸಕಾರಾತ್ಮ ಸ್ಪಂದಿಸಿದ್ದಾರೆ. ಮಠಾಧೀಶರು, ಸಂಘ ಸಂಸ್ಥೆಗಳು ಹಾಗೂ ಪ್ರಗತಿಪರ ಚಿಂತಕರು ,ಸಾಹಿತಿಗಳು ಬುದ್ದಿಜೀವಿಗಳು ಕೂಡಾ ಬೆಂಬಲ ವ್ಯಕ್ತಪಡಿಸಿರುವದರಿಂದ ಅಭಿನಂದನೆಸಲ್ಲಿಸುವುದಾಗಿ ಹೇಳಿದರು.
371 ಜೆ, ಮಾಡುವಾಗ ಜಿಲ್ಲಾ ರಾಜಕಾರಣಿಗಳು ಇಚ್ಛಾಶಕ್ತಿಯಿಂದ ಧ್ವನಿಗೂಡಿಸಿದರೆ ವಿಜಯಪೂರ ಜಿಲ್ಲಾ ಕೂಡಾ ಹೈದರಾಬಾದ ಕರ್ನಟಕದಲ್ಲಿ ಸೇರಿ ನಮ್ಮ ಪಿಳಿಗೆಗೆ ಉದ್ಯೋಗ ,ಶಿಕ್ಷಣ ,ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತಿತ್ತು.
ವಿಧಾನಸಭೆಯ ಅಧಿವೇಶನದಲ್ಲಿ ಜಿಟಿಟಿಸಿ ಕುರಿತು ಶಾಸಕ ಕೌಜಲಗಿ ಪ್ರಶ್ನೆ ಮಾಡಿದಕ್ಕೆ ನಮ್ಮ ಜಿಲ್ಲೆಯ ಪುಣ್ಯಾತ್ಮರು ವಿರೋಧ ವ್ಯಕ್ತಪಡಿಸಿರುವುದು ಎಷ್ಟು ಸರಿ ? ಈ ಜಿಲ್ಲೆಗೆ ಇನ್ನು 9 ಯೋಜನೆಗಳು ಬರಬೇಕು ರಾಜಕಾರಣ ಮಾಡುತ್ತಿರುವ ನಿಮಗೆ ನನ್ನ ಸೇರಿದಂತೆ ನಾಚೀಕೆಯಾಗಬೇಕು. ತೋಟಗಾರಿಕಾ ಕಾಲೇಜು ಮಾಡುವಾಗ ಬಾಗಲಕೋಟೆಗೆ ಹೋಗಿದೆ ಅಂದು ನಿಮಗೆ ಯಾವಪುರುಷಾರ್ಥ ಇತ್ತು ನಮ್ಮ ಭಾಗಕ್ಕೆ ತರಬೇಕಾಗಿತ್ತು ರಾಜಕಾರಣಿಗಳಲ್ಲಿ ಬದ್ದತೆ ಇರಬೇಕು ಮಾತನಾಡಿದಂತೆ ನಡೆದುಕೊಳ್ಳಬೇಕು ಎಂದು ಹರಿಹಾಯ್ದರು.

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಕೃಷ್ಣಾ ಕೊಳ್ಳದ ಮಾಹಿತಿ ತಗೆದುಕೊಂಡರೆ ದುರ್ದೈವ ಸಂಗತಿ, ಕರ್ನಾಟಕದ ಕೃಷ್ಣಾ ನದಿಗೆ ಒಂದು ಧೋರಣೆ ಕಾವೇರಿ ನದಿಗೆ ಮತ್ತೊಂದು ಧೋರಣೆ, ನಮ್ಮ ಜಿಲ್ಲೆ 371ಜೆಗೆ ಬೇಕಾದ ಎಲ್ಲಾ ಅರ್ಹತೆ ಪಡೆದರೂ ಇಚ್ಚಾಶಕ್ತಿ ಕೊರತೆಯಿಂದ ಸೆರ್ಪಡೆಗೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ಭಾಗ ಸಮಗ್ರ ನೀರಾವರಿಯಾಗಬೇಕಾಗಿದೆ.ತುರ್ತು 19 ಕೆರೆಗಳು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಕರ್ನಾಟಕ ರಾಜ್ಯದಲ್ಲಿಯೇ ವಿಜಯಪೂರ ಭಾಗದ ರೈತರು ಶೆ,75 ರಷ್ಟು ತೋಟಗಾರಿಕೆ ಬೆಳಗಳನ್ನು ಬೆಳೆಯುತ್ತಾರೆ ಇಂತಹ ಬಹುವಾರ್ಷಿಕ ಬೆಳೆಗಳನ್ನು ಉಳಿಸುವ ಜವಾಬ್ದಾರಿ ಸರಕಾರಗಳ ಮೇಲಿದೆ ಎಂದರು.
ಎಂ.ಆರ್ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷ ಜಯಶ್ರೀ ಬೋಸಗಿ, ಎಚ್.ಎನ್ ಶ್ರೀನಿವಾಸ ,ಗೋವಿಂದ ರಾಠೋಡ, ಮಹಾದೇವ ಪೂಜಾರಿ, ಬಿ.ಬಿ ಗಡ್ಡದ, ಮಲ್ಲು ಬೋಸಗಿ, ಶ್ರೀಮಂತ ಇಂಡಿ, ಸಂಬಾಜಿ ಮಿಸಾಳೆ, ಎಂ.ಆರ್ ಪಾಟೀಲ , ಸುರೇಶಗೌಡ ಪಾಟೀಲ, ಗುರಣ್ಣಗೌಡ ಪಾಟೀಲ,ಜಟ್ಟೆಪ್ಪ ರವಳಿ, ಜಾವೀದ ಮೋಮಿನ್, ಪ್ರಶಾಂತ ಕಾಳೆ, ಶೇಖರ ನಾಯಕ, ಮನೋಜಕುಮಾರ ಗಡಬಳ್ಳಿ , ಎಸ್.ಆರ್ ರುದ್ರವಾಡಿ , ಸದಾಶಿವ ಪ್ಯಾಟಿ, ದಯಾನಂದ ಮಠ ಸೇರಿದಂತೆ ಅನೇಕರಿದ್ದರು.

ಜಿ.ಆರ್ ಭೋಸಗಿ ನಿರೂಪಿಸಿ .ಪಿ. ಬಮ್ಮಹಳ್ಳಿ ವಂದಿಸಿದರು.

ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಬಂದಿರುವದರಿಂದ ನಾನು ಯಾವ ಅಪೇಕ್ಷೆ ಪಡುವವುದಿಲ್ಲ . ಕಾರ್ಖಾನೆ ಪ್ರಾರಂಭದಲ್ಲಿ ಈ ಕಾರ್ಖಾನೆಯ ಬೆಳೆಸುವ ಉದ್ದೇಶದಿಂದ ಚುನಾವಣೆಯ ಸಂದರ್ಬದಲ್ಲಿ ನಾನು ಸದಸ್ಯರ ಮನ ಒಲಿಸಿ ಅಧ್ಯಕ್ಷನಾಗಿರುವೆ, ಆದರೆ ಈ ಚುನಾವಣೆ ನೇರಾ ನೇರಾ ಬೇಕಾದವರೂ ನಿಲ್ಲಲ್ಲಿ ರೈತರು ಒಳ್ಳೇಯವರಪರ ರೈತರ.ಕಾರ್ಖಾನೆಯ ಹಿತ ಚಿಂತನೆ ಇಟ್ಟುಕೊಂಡಿರುವವರಿಗೆ ಆಯ್ಕೆ ಮಾಡಬೇಕು ಎಂದು ಹೇಳಿದರು.
ಶಾಸಕ ಯಶವಂತರಾಯಗೌಡ ಪಾಟೀಲ.