ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಹುಂಡಿಯಲ್ಲಿ 30.41ಲಕ್ಷ ಹಣ ಸಂಗ್ರಹ

ಕಾಳಗಿ :ಮಾ.29: ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸೇಡಂ ಸಹಾಯಕ ಆಯುಕ್ತ ಕಛೇರಿ ತಹಶಿಲ್ದಾರ ಸಿದ್ರಾಮ ನಾಚವಾರ ನೇತೃತ್ವದಲ್ಲಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು ? 30,41,359 ರೂ. ಹಣ ಸಂಗ್ರಹವಾಗಿವೆ ಎಂದು ಕಾಳಗಿ ತಾಲೂಕು ಗ್ರೇಡ್-2 ತಹಶಿಲ್ದಾರ ನಾಗನಾಥ ತರಗೆ ತಿಳಿಸಿದ್ದಾರೆ.
ಅಕ್ಟೋಬರ್ 2022 ರಿಂದ ಮಾರ್ಚ್ 2023ರ ವರೆಗಿನ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕಂದಾಯ ಇಲಾಖೆ ಸಿಬ್ಬಂಧಿಗಳು ಎಣಿಕೆ ಮಾಡಿದ್ದು ಒಟ್ಟು ? 30,41,359 ರೂ. ಹಣ, 2 ಕೆ.ಜಿ 95ಗ್ರಾಂ ಬೆಳ್ಳಿ, 65ಗ್ರಾಂ ಬಂಗಾರ ಸಂಗ್ರಹವಾಗಿವೆ. ನಗದು ಹಣವನ್ನು ರೇವಾಯಿ ಕೆಜಿಬಿ ಬ್ಯಾಂಕಿನ ದೇವಸ್ಥಾನ ಹೆಸರಿನಲ್ಲಿ ಹಣ ಜಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಳಗಿ ತಾಲೂಕು ತಹಶಿಲ್ದಾರ ಸಂಗಯ್ಯಸ್ವಾಮಿ, ಗ್ರೇಡ್-2 ತಹಶಿಲ್ದಾರ ನಾಗನಾಥ ತರಗೆ, ಎಸ್’ಡಿಎ ದೇವಪ್ಪ ಸುರಪುರಕರ್, ದೇವಸ್ಥಾನ ಕಾರ್ಯದರ್ಶಿ ಮಂಜುನಾಥ ನಾವಿ, ಉಪ ತಹಶಿಲ್ದಾರ ಮಾಣಿಕ ಘತ್ತರಗಿ, ರವಿಕುಮಾರ್, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ಬಸವಣಪ್ಪ ಹೂಗಾರ, ಸಂತೋಷ ಮಾನವಿಕರ್, ಕ್ಯಾಮರಾಮನ್ ವೀರಯ್ಯ ಮಠಪತ್ತಿ ಮುಕರಂಬಾ, ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂಧಿಗಳು ಇದ್ದರು. ಕಾಳಗಿ ಪೆÇಲೀಸ್ ಠಾಣೆ ಸಿಬ್ಬಂಧಿಗಳು ಬಂದೋಬಸ್ತ್ ಒದಗಿಸಿದರು.