ರೇಣುಕಾ ಸಾಗರ ಜಲಾಶಯದಿಂದ ನೀರು ಬಿಡುಗಡೆ

ಧಾರವಾಡ,ನ13: ಮಲಪ್ರಭಾ ಯೋಜನಾ ವಲಯದಡಿಯಲ್ಲಿನ ರೇಣುಕಾ ಸಾಗರ ಜಲಾಶಯದಿಂದ ನ. 11 ರಿಂದ ಮಲಪ್ರಭಾ ಬಲದಂಡೆ ಮತ್ತುಎಡದಂಡೆ, ನರಗುಂದ ಶಾಖಾ, ಕೊಳಚಿ ಕಾಲುವೆ ಮತ್ತು ಏತ ನೀರಾವರಿ ಯೋಜನೆಗಳ ಮೂಲಕ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ.
ಸವದತ್ತಿ ಬಳಿಯ ನವಿಲು ತೀರ್ಥದಲ್ಲಿ ಜರುಗಿದ ನೀರಾವರಿ ಸಮಾಲೋಚನ ಸಮಿತಿಯ ಅಧ್ಯಕ್ಷ ಸದುಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ತೀರ್ಮಾನ ಕೈಕೊಳ್ಳಲಾಯಿತು.
ರೈತರ ಬೆಳೆಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ನೀರು ಹರಿಸಲಾಗುತ್ತಿದೆ.
ಆದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತ ಬಾಂದವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ತಮ್ಮ ಕ್ಷೇತ್ರದ ಶೇ.60 ರಷ್ಟು ಕ್ಷೇತ್ರಕ್ಕೆ ಬೆಳೆಯಲು ಹಾಗೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಕೋರಲಾಗಿದೆ.
ನೀರು ಹರಿಯುವ ಮುಖ್ಯ ಕಾಲುವೆ ದಡದಲ್ಲಿ ಈಜಾಡಲು, ದನ-ಕರುಗಳ ಮೈ ತೊಳೆಯಲು, ಇತ್ಯಾದಿಗಳಿಗೆ ಸಾರ್ವಜನಿಕರು ತೆರಳಿ ಅನಾಹುತಗಳು ಸಂಭವಿಸುತ್ತಿರುವುದರಿಂದ, ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಈ ದಿಶೆಯಲ್ಲಿ ಮಲಪ್ರಭಾ ಯೋಜನೆಯ ನಿಗಮದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಎಂದು ಪಾಟೀಲ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಲಾಶಯಕ್ಕೆ ಅಧ್ಯಕ್ಷ ಸದುಗೌಡ ಪಾಟೀಲ ಬಾಗಿನ ಅರ್ಪಿಸಿದರು.
ಸಮಿತಿಯ ಉಪಾಧ್ಯಕ್ಷ ನಾಗಪ್ಪ ಅಡಪಟ್ಟಿ, ಸುರೇಶ ನಿಡವಣಿ, ಡಿ.ವೈ.ಕಾಡಪ್ಪನವರ , ವಾಲ್ಮೀ ನಿರ್ದೇಶಕ ಡಾ.ರಾಜೇಂದ್ರ ಪೆÇೀದ್ದಾರ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.