ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕೋಲಾರ, ಏ.೮:ತಾಲೂಕಿನ ನರಸಾಪುರ ಗ್ರಾಮದ ಕುರ್ಕಿ ಕೆರೆಯ ಸಮೀಪದಲ್ಲಿ ಇರುವ ಏಳು ಅಕ್ಕನವರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪೂಜೆ ಮತ್ತು ದೀಪೋತ್ಸವ ವನ್ನು ನರಸಾಪುರ ಗ್ರಾಮದ ಹಿರಿಯರಾದ ದಿವಂಗತ ಅರ್ಜುನಪ್ಪ ರವರ ಕುಟುಂಬ ವರ್ಗದವರಿಂದ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಪೂಜಾರಿ ಮಂಜುನಾಥ್ ರವರು ಮಾತನಾಡಿ, ಶ್ರೀ ಯಲ್ಲಮ್ಮ ದೇವಿಯು ಈ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿ ಗ್ರಾಮಸ್ಥರಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ಯುಗಾದಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ದೇವರಿಗೆ ಪಚ್ಚೆ ಇಡುವ ಕಾರ್ಯವು ಪ್ರತಿ ವರ್ಷ ನಡೆಯುತ್ತದೆ. ಈ ಪಚ್ಚೆ ಇಡುವುದರಿಂದ ತಾಯಿ ಪುಣಿತಳಾಗಿ ನಮ್ಮನ್ನು ಕಾಪಾಡುತ್ತಾಳೆ ಎಂದು ನಂಬಿಕೆ ಎಂದು ತಿಳಿಸಿದರು.
ಈ ದೇವಸ್ಥಾನವು ಕ್ರಿ.ಶ.೧೪ರ ಕಾಲದ ದೇವಾಲಯವೆಂದು ಹೇಳಲಾಗಿದೆ. ಈ ಸ್ಥಳದಲ್ಲಿ ೭ ಕಲ್ಲಿನ ಗುಂಡುಗಳು ಇದ್ದು, ಈ ೭ ಗುಂಡುಗಳೇ ಏಳು ಅಕ್ಕ ತಂಗಿಯರು ಎಂದು ಹೇಳುತ್ತಾರೆ
ಅಲ್ಲದೆ ಅಂದು ರಾತ್ರಿ ತಿಪ್ಪಮ್ಮಅವರ ಕನಸಿನಲ್ಲಿ ಅಕ್ಕ ತಂಗಿಯರು ಹೋಗಿ ನಾವು ಈ ಸ್ಥಳದಲ್ಲಿ ಇದ್ದೇವೆ ನಮಗೆ ಗುಡಿ ಕಟ್ಟಿಸುವಂತೆ ಹೇಳುತ್ತಾರೆ ಆಗ ಅದಕ್ಕಾಗಿ ಈ ಗುಡಿಯನ್ನು ಕಟ್ಟಿಸಿದ್ದಾರೆ ಎಂದು ಹೇಳಿದ್ದಾರೆ
ಈ ದೇವಾಲಯವು ನರಸಾಪುರ ಗ್ರಾಮಕ್ಕೆ ಹತ್ತಿರದಲ್ಲಿದ್ದು, ಊರಿನ ಜನರು ತಮ್ಮ ಹೊಲ ಕೊಯಿಲಿಗೆ ಬಂದ ಸಂದರ್ಭದಲ್ಲಿ ಮೊದಲು ಏಳು ಅಕ್ಕನವರ ಶ್ರೀ ಯಲ್ಲಮ್ಮ ದೇವಿಗೆ ಮೊದಲು ಪೂಜೆಯನ್ನು ಸಲ್ಲಿಸಿ ನಂತರ ಹೊಲವನ್ನು ಕೊಯ್ಯುವುದು ವಾಡಿಕೆಯಾಗಿದೆ.
ಈ ದೇವಾಲಯಕ್ಕೆ ಪೂಜೆಯನ್ನು ಸಲ್ಲಿಸಲು ಕೇವಲ ನರಸಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಅಲ್ಲದೆ ದೂರದ ಊರುಗಳಿಂದ ಇಲ್ಲಿಗೆ ಭೇಟಿ ನೀಡಿ ತಾಯಿಯ ಆಶೀರ್ವಾದವನ್ನು ಪಡೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕೆ ಆರ್ ಪುರಂ ನಾಗರಾಜ್. ಶಾಂತ. ಟೈಕೋ ನಾರಾಯಣಸ್ವಾಮಿ. ಮಮತ. ನಿರ್ಮಲ. ಮುನಿ ವೆಂಕಟಮ್ಮ. ವಿಶಾಲಮ್ಮ. ಅವಿನಾಶ್. ಶಿಲ್ಪ. ಗೀತಾ. ವೆಂಕಟೇಶ್. ಹಾಗೂ ದಿವಂಗತ ಅರ್ಜುನಪ್ಪ ರವರ ಕುಟುಂಬ ವರ್ಗದವರು ಹಾಜರಿದ್ದರು.