ರೇಣುಕಾಚಾರ್ಯ ವೃತ್ತಕ್ಕೆ ಕಾಮಗಾರಿಗೆ ಭೂಮಿ ಪೂಜೆ

ರಾಯಚೂರು,ಮಾ.೦೫-
ನಗರ ಶಾಸಕರಾದ ಶಿವರಾಜ ಪಾಟೀಲ್ ಅವರು ಶ್ರೀ ರೇಣುಕಾಚಾರ್ಯ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ,ರೇಣುಕಾಚಾರ್ಯ ವೃತ್ತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಗರದ ಮುಖ್ಯದ್ವಾರ, ರಾಯಚೂರು ಬೈಪಾಸ್ ಇಲ್ಲಿಂದ ನಗರಕ್ಕೆ ಬರುವ ಪ್ರತಿಯೊಬ್ಬ ನಾಗರಿಕರಿಗೂ ಶ್ರೀ ರೇಣುಕಾಚಾರ್ಯರ ಆಶೀರ್ವಾದವಾಗಲಿ ಎನ್ನುವ ದೃಷ್ಟಿಯಲ್ಲಿ ಇಂದು ಬೈಪಾಸ್ ರಸ್ತೆಯಲ್ಲಿ ೨೫ ಲಕ್ಷ ರೂಪಾಯಿಗಳ ಅನುದಾನದಲ್ಲಿ ಶ್ರೀ ರೇಣುಕಾಚಾರ್ಯ ವೃತ್ತಕ್ಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಶಾಸಕರಾದ, ಬಸನಗೌಡ ದದ್ದಲ್, ಎನ್ ಎಸ್ ಬೋಸರಾಜ್ ಹಾಗೂ ಇತರರು ರೇಣುಕಾಚಾರ್ಯ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.