ರೇಣುಕಾಚಾರ್ಯ ಮೂರ್ತಿ ಭಿನ್ನ : ಸುಳ್ಳು ಆರೋಪ

ಕಾಳಗಿ :ಎ.15: ತಾಲೂಕಿನ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿನ 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಭಿನ್ನವಾಗಿದೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದ್ದೂ, ರಾಜಕೀಯ ದುರುದ್ದೇಶದಿಂದ ಭಕ್ತರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಾಲೂಕಿನ ವೀರಶೈವ ಸಮಾಜ ಮುಖಂಡ ಹಾಗೂ ವಕೀಲ ಶಿವಶರಣಪ್ಪ ಜಾಪಟ್ಟಿ ತಿಳಿಸಿದ್ದಾರೆ.

 ತಾಲೂಕಿನ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಮುಂದೆ ತಾಲೂಕು ವೀರಶೈವ ಸಮಾಜ ಮುಖಂಡರು ಹಮ್ಮಿಕೊಂಡ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.
 ರಾಜಕೀಯ ಹತಾಸೆಯಿಂದ ಕೆಲ ಮುಖಂಡರು ವೀರಶೈವ ಲಿಂಗಾಯತರ ಹೆಸರು ಹೇಳಿಕೊಂಡು ರೇವಣಸಿದ್ದೇಶ್ವರ ದೇವಸ್ಥಾನ ಹೆಸರಲ್ಲಿ ಸುಳ್ಳು ಆರೋಪಗಳ ಮೂಲಕ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಕಾಣದ ಕೈಗಳು ಲಿಂಗಾಯತ ಸಮಾಜ ಒಡೆಯಲು ನಮ್ಮವರಿಂದಲೇ ಪ್ರಯತ್ನಿಸುತ್ತಿರುವದು ಸಮಾಜಕ್ಕೆ ಕೆಟ್ಟ ಹೆಸರು ತರುತ್ತಿದ್ದೆ ನಾವೇಲ್ಲರು ಜಾಗೃತರಾಗಬೇಕು ಎಂದರು.
  ಈ ಹಿಂದೆ ರೇವಗ್ಗಿ ಗುಡ್ಡದಲ್ಲಿ ದೇವಸ್ಥಾನ ಪರಮ ಭಕ್ತ ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ 53ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಬಿರುಗಾಳಿಗೆ ಉರುಳಿ ಬಿದ್ದತು ಆಗ ಒಬ್ಬರು ಮೂರ್ತಿ ಮರುನಿರ್ಮಾಣಕ್ಕೆ ಮುಂದೆ ಬಾರದಿದ್ದಾಗ, ಮತ್ತೆ ಅವರೇ ಮುಂದೆ ಬಂದು 51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಮರುನಿರ್ಮಾಣ ಮಾಡಿರುವುದು ಶ್ಲಾಘನೀಯ, ಇಂತಹ ಕೆಲಸ ಮಾಡಿದ ಜಾಧವ ಕುಟುಂಬಕ್ಕೆ ಲಿಂಗಾಯತ ಸಮಾಜ ಅಭಿನಂದನೆಗಳು ಹೇಳಬೇಕು, ಇದನ್ನು ಬಿಟ್ಟು ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
  ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಗರ್ಭ ಗುಡಿಯ ಮೂರ್ತಿ ಮತ್ತು ಪಾದುಕೆಗಳ ಮೇಲೆ ದೇಣಿಗೆ ನೀಡಿದ ದಾನಿಗಳ ಹೆಸರುಗಳಿವೆ ಇದನ್ನು ಪ್ರಶ್ನೆ ಮಾಡದ ಕೆಲ ಮುಖಂಡರು ಸೇವಾ ಮನೋಭಾವನೆಯಿಂದ 51 ಅಡಿ ಎತ್ತರ ರೇಣುಕಾಚಾರ್ಯ ಮೂರ್ತಿ ನಿರ್ಮಿಸಿ ಉದ್ಭವ ಲಿಂಗ ಮುಂದೆ ಶಾಸಕ ಡಾ. ಅವಿನಾಶ ಜಾಧವ ಹೆಸರಿನ ಬೊರ್ಡ್ ಇಟ್ಟಿರುವುದನ್ನು ಪ್ರಶ್ನೆ ಮಾಡುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ. ಇದರಿಂದ ಯಾವುದೇ ಭಕ್ತರು ಹಾಗೂ ವೀರಶೈವ ಲಿಂಗಾಯತ ಸಮಾಜ ಮುಖಂಡರ ಮನಸ್ಸಿಗೆ ನೋವಾಗಿಲ್ಲ, ಸಮಾಜ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ ಎಂದು ಹೇಳಿದರು.
  ವೀರಶೈವ ಸಮಾಜ ಮುಖಂಡ ನಿಂಬೆಣಪ್ಪ ಮಂಗಲಗಿ ಮಾತನಾಡಿ, ರೇವಗ್ಗಿ ಗುಡ್ಡದಲ್ಲಿ ರೇಣುಕಾಚಾರ್ಯ ಮೂರ್ತಿ ಭಿನ್ನವಾಗಿಲ್ಲ ಇದು ಸುಳ್ಳು ಆರೋಪ, ರಾಜಕೀಯ ದುರುದ್ದೇಶದಿಂದ ವಿರೋಧ ಪಕ್ಷದವರು ಲಿಂಗಾಯತ ಸಮಾಜ ಒಡೆಯಲು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ರೇಣುಕಾಚಾರ್ಯ ಮೂರ್ತಿ ಮುಂದೆ ಕುಳಿತುಕೊಂಡು ಸುದ್ದಿಗೋಷ್ಟಿ ಮಾಡುತ್ತಿದ್ದೆವೆ ಮೂರ್ತಿ ಭಿನ್ನವಾಗಿಲ್ಲ ಎಂದರು.
 ತಾಲೂಕು ಬಸವ ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿನಾಥ ಕೊಲಕುಂದಿ, ಸಂತೋಷ ಪಾಟೀಲ ಮಂಗಲಗಿ, ವಿಜಯಕುಮಾರ ಚೆಂಗಟಿ, ತಾಲೂಕು ವೀರಶೈವ ಸಮಾಜ ಅಧ್ಯಕ್ಷ ರೇವಣಸಿದ್ಧ ಬಡಾ, ಕಾಳಗಿ ನಗರ ವೀರಶೈವ ಸಮಾಜ ಅಧ್ಯಕ್ಷ ಜಗಧೀಶ ಮಾಲಿಪಾಟೀಲ, ಶರಣು ಪಾಟೀಲ, ಜಗಧೀಶ ಪಾಟೀಲ ರಾಜಾಪೂರ, ಸಿದ್ದು ಮಾನಕಾರ, ರವಿ ಪಾಟೀಲ ಭೆಡಸೂರ, ಶಿವರಾಜ ಪಾಟೀಲ ಗೊಣಗಿ, ರೇವಶೆಟ್ಟಿ ಪಾಟೀಲ ಗೊಣಗಿ, ಶಿವರಾಜ ಪಾಟೀಲ ಅರಣಕಲ್, ರಾಮರಾವ ಪಾಟೀಲ ಮೋಘಾ, ಶರಣು ಚಂದಾ, ಶೈಲೇಶ ಹುಲಿ, ಶಿವಕುಮಾರ ಪಾಟೀಲ ಹೇರೂರ, ಕಾಳಶೆಟ್ಟಿ ಪಡಶೆಟ್ಟಿ, ವಿಷ್ಣುಕಾಂತ ಪರುತೆ, ರಾಜಶೇಖರ ಗುಡಾದ, ರಾಜು ಸೀಳಿನ್, ಸಂಜುಕುಮಾರ ತೆಳಮನಿ, ಸಿದ್ದು ಚಿಟ್ನಳ್ಳಿ, ಮಂಜುನಾಥ ಭೇರನ್, ಅಂಬರೀಶ್ ಸಾಲಹಳ್ಳಿ, ಆನಂದ ಕೇಶ್ವರ, ಸಿದ್ದಯ್ಯಸ್ವಾಮಿ ಮುಕರಂಬಿ ಸೇರಿದಂತೆ ಇತರರು ಇದ್ದರು.