ರೇಣುಕಾಚಾರ್ಯ ಜಯಂತಿ ಸರಕಾರಿ ಕಾಯ೯ಕ್ರಮದಲ್ಲಿ ಏಕತೆ  ಉಳಿದೆಡೆ ಪ್ರತ್ಯೇಕತೆ ! 


ಸಂಜೆವಾಣಿ ವಾರ್ತೆ
ಕುಕನೂರು, ಮಾ.06;  ರಾಜ್ಯ ಸರಕಾರವು ಆದಿ ಗುರು ಶ್ರೀ ರೇಣಕಾಚಾರ್ಯರ ಜಯಂತಿಯನ್ನು ಆಚರಿಸಲು ಕಳೆದ ಎರಡು ವರುಷ ಗಳಿಂದ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಆಯಾ ಸರಕಾರಿ ಕಚೇರಿ ಗಳಲ್ಲಿ ಸಮಾಜ ಬಾಂಧವರ ಸಮ್ಮುಖ ಆಚರಿಸುವಾಗ ಸಮಾಜ ಸಂಘಟನೆ ಪದಾಧಿಕಾರಿಗಳು ಏಕತೆಯಿಂದ ಪಾಲ್ಗೊಂಡು ಸರಕಾರಿ ಕಾಯ೯ಕ್ರಮ ಯಶಸ್ವಿ ಗೋಳಿಸುತ್ತಾರೆ  ಆದರೆ, ನಂತರ ಸಮಾಜದ ವತಿಯಿಂದ ನಡೆಯುವ ಕಾಯ೯ಕ್ರಮಗಳು ಪ್ರತಿ ಬಾರಿಯೂ ಪ್ರತ್ಯೇಕ ವಾಗಿ ಆಚರಿಸುತ್ತಾ ಸಮಾಜದ ವಿವಿಧ ಸ್ತರಗಳ ಜನರ ಚೆಚೆ೯ಗೆ ಕಾರಣವಾಗುತ್ತದೆ, ಪ್ರಸಕ್ತ ವಿಷಯ ಕುರಿತಂತೆ ಅಖಂಡ  ಯಲಬುರ್ಗಾ  ಕುಕನೂರು ತಾಲೂಕಿನಲ್ಲೂ ಎರಡು ಜಂಗಮ ಸಮಾಜದ ಸಂಘಟನೆ ಗಳಿವೆ, ಒಂದು ಸಿದ್ದಯ್ಯ ಕಲ್ಲಿಮಠ ಸಂಘಟನೆ ಮತ್ತೊಂದು ಮಹೇಶ ಕಲ್ಮಠ ತಂಡದ್ದು. ಎರಡೂ ಸಂಘ ಗಳ ಪ್ರತ್ಯೇಕ ಪೂವ೯ಭಾವಿ ಸಭೆ ನಡೆದು ರೇಣುಕಾಚಾರ್ಯ ಜಯಂತಿ ಯನ್ನೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಾಚ೯ ೨೩ರಂದು ಸಿದ್ದಯ ಕಳ್ಳಿ ಮಠ ಟೀಮ್ ಆಚರಿಸಲು ಸಿದ್ಧತೆ ನಡೆಸಿದೆ ಹಾಗೂ ಮಹೇಶ್ ನೇತೃತ್ವದ ತಂಡ ೨೬ರಂದು ನಡೆಸಲು ನಿದ೯ರಿಸಲಾಗಿದೆ. ವಿಶೇಷ ಏನಂದ್ರೆ ಎರಡೂ ಪ್ರತ್ಯೇಕ ಜಯಂತಿ ಗಳನ್ನ ಕುಕನೂರು ಪಟ್ಟಣದಲ್ಲಿ ನಡೆಯಲಿದ್ದು ತೀವ್ರ ಕುತೂಹಲ ಕೆರಳಿಸಿದೇ .  ಚುನಾವಣಾ ಸಂದಭ೯ ಮತದಾರ ರ ಮೇಲೆ ಗಮನ ಬಿಟ್ಟಿರುವ ರಾಜಕೀಯ ಪಕ್ಷಗಳು ಯಾವ ಬಣಕ್ಕೆ ಎಸ್ಟು ಆದ್ಯತೆ ನೀಡಿದರೆ ಏಷ್ಟು ಪರಿಣಾಮ ಬೀರಬಲ್ಲದು ಎನ್ನುವ ಮಾತುಗಳು ಸಾವ೯ಜನಿಕ ಚೇಚೆ೯ಯಾದರೆ , ಜಂಗಮ ಸಮಾಜದ ಪ್ರಜ್ಞಾವಂತ ರಾದ ಕೆಲವರು ಎರಡು ಪ್ರತ್ಯೇಕ ಜಯಂತಿ ಬೇಕಿರಲಿಲ್ಲ,  ಎರಡು ತಂಡಗಳನ್ನು ಒಂದು ಗುಡಿಸುವ ಕೆಲ್ಸ ನಡೆಯಲಿ  .  ಎನ್ನುತ್ತಿದ್ದಾರೆ.ಭಾನುವಾರ ವಿವಿಧ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತ್ಯೇಕ ಜಯಂತಿಗಳ ಬಗ್ಗೆ ಅಪಸ್ವರದ ಮಾತುಗಳೇ ಬಂದಿವೆ. ಕೆಲವು ಪದಾಧಿಕಾರಿಗಳು ಏಕತೆಯಿಂದ ಸಂಘಟನೆ ಒಂದಾಗಿ ನಡೆಸಬೇಕೇ ವಿನಃ ತಮ್ಮ ತಮ್ಮ ಸ್ವಾಥ೯ಕ್ಕ್  ಗೊಂದಲ ಎಬ್ಬಿಸ ಬಾರದು ಎನ್ನುವ ಮಾತು ಕೇಳಿ ಬಂದಿವೆ.  
ಬಾಕ್ಸ್ : 
ಆದಿ ಜಗದ್ಗುರು ರೇಣುಕಾ ಚಾಯ೯ರು ಇಡೀ ಮಾನವ ಕುಲಕ್ಕೆ ಒಳಿತು ಬಯಸುವವರು ಆದರೆ ಕೇವಲ ಜಂಗಮ ಸಮಾಜದ ಕೆಲವರು ಜಯಂತಿ ನೆಪ ದಲ್ಲೂ ಪ್ರತ್ಯೇಕ ಸಭೆ ಮಾಡಿ ಹಾದಿ ಬೀದಿ ಜಗಳ ತೆಗೆಯುತ್ತಾ ಜನರ ದಾರಿ ತಪ್ಪಿಸುವುದು ಒಂದೆಡೆ ಯಾದರೆ ಮಹಾತ್ಮರನ್ನು ಮರೆಯುತ್ತಿರುವ ಬಗ್ಗೆ ಸಂಘ ಟಕರ ಬಗ್ಗೆ ನಂಬಿಕೆಯಿಲ್ಲ. ಕೆಲ ಧಾಮಿ೯ಕ ಮುಖಂಡರು ಡಿಜೆ ಬೇಕೆಂದರೆ ಮತ್ತೆ ಕೆಲ್ವರು ಬೇಡ ಅಂತಾರೆ. ಇದರಿಂದ ಜಯಂತಿ ಆಚರಣೆ ಸಾಥ೯ಕ ವಾಗಲಿ.
– ಮಂಜುನಾಥ್ ಸೊಪ್ಪಿನ ಯುವ ಮುಖಂಡ