ರೇಣುಕಾಚಾರ್ಯ ಜಯಂತಿ ಆಚರಣೆ


ನವಲಗುಂದ,ಮಾ.24: ಶ್ರೀ ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶ್ರೀ ರೇಣುಕಾಚಾರ್ಯರ ಕಾರ್ಯ ನಮಗೆಲ್ಲ ಆದರ್ಶ ಎಂದು ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕಾ ಆಡಳಿತದಿಂದ ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು
ಜಂಗಮ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ ಜಾತಿ ಜಾತಿ ಮಧ್ಯ ವೈಷಮ್ಯ ಬೇಡ ಮಾನವ ಕುಲ ಒಂದೇ, ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶಿವನ ಇನ್ನೊಂದು ರೂಪವೇ ಜಗದ್ಗುರು ರೇಣುಕಾಚಾರ್ಯರು ಎಂದರು
ಜಂಗಮ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಹಿರೇಮಠ, ಕೊಟ್ರೇಶ ಹಿರೇಮಠ, ಎಮ್.ಡಿ.ಕುಲಕರ್ಣಿ, ವೀರಯ್ಯ ಜಾವೂರಮಠ, ಬಸು ಕೆರಿಮಠ, ದೇವರಾಜ ಹಿರೇಮಠ, ಮಲ್ಲಯ್ಯ ಸುಭೇದಾರಮಠ, ಪ್ರಶಾಂತ ಹಿರೇಮಠ, ನಾಗರಾಜ ಸುಭೇದಾರಮಠ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.