ರೇಣುಕಾಚಾರ್ಯ ಜಯಂತಿ ಅತಿ ವಿಜೃಂಭಣೆಯಿಂದ ಆಚರಣೆ

ಕಲಬುರಗಿ:ಮಾ. 05: ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಇತಿಹಾಸದಲ್ಲೇ ದಾಖಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ ಪಾಟೀಲ್ ರೇವೂರ ಹೇಳಿದರು.
ಭಾನುವಾರದಂದು ಡಾ. ಎಸ್.ಎಂ. ಪಂಡಿತ ರಂಗಮಂದರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಫಾಟಿಸಿ ಮಾತನಾಡಿದರು. ಶ್ರೀ ಜಗದ್ಗರು ರೇಣುಕಾಚಾಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಅನೇಕ ಜಿಲ್ಲೆಯಿಂದ ಸಾರ್ವಜನಿಕರು ಹಾಗೂ ಅನೇಕ ಸಮಾಜ ಹೆಣ್ಣು ಮಕ್ಕಳು ಮತು ಸ್ವಾಮಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ತುಂಬಾ ಸಂತೋಷ ತಂದಿದೆ. ನಾನು ಮಾನ್ಯ ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಅವರ ಜೊತೆಯಲ್ಲಿ ಮಾತನಾಡಿದ್ದಾಗ ತಕ್ಷಣವೇ ನಮಗೆ ಸ್ಪಂದಿಸಿದ ಅವರು ಜಯಂತಿಯನ್ನು ಮಾಡಲು ಅನುಕೂಲಮಾಡಿಕೊಟ್ಟಿದ್ದಾರೆ ಅವರಿಗೆ ತುಂಬಾ ಹೃದಯದಿಂದ ಹರ್ಷವ್ಯಕ್ತಪಡಿಸುತ್ತೇನೆ ಎಂದರು.
ಸಾಕ್ಷತ ಗುರು ಎಂದರೆ ರೇಣುಕಾಚಾರ್ಯ ಎಂದರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕು ಅವರ ಆದರ್ಶ ತತ್ವಗಳನ್ನು ನಾವು ಪಾಲಿಸಬೇಕೆಂದರು.
ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಸರ್ಕಾರವನ್ನು ಜಯಂತಿ ಕಾರ್ಯಕ್ರಮ ಅನುಕೂಲಮಾಡಿಕೊಟ್ಟಿದ್ದಾರೆ ಇದು ದೊಡ್ಡ ಇತಿಹಾಸ ಸೃಷ್ಟಿಮಾಡಿದೆ ಜಗದ್ಗುರು ರೇಣುಕಾಚಾರ್ಯ ಆಗಿನ ಕಾಲದಲ್ಲಿ ಪಂಚಪೀಠವನ್ನು ಸ್ಥಾಪಿಸಿದರು. ಅನೇಕ ಹಲವಾರು ಸಂದೇಶಗಳನ್ನು ಜಗತ್ತಿಗೆ ಸಾರಿದ್ದಾರೆ ಅವರ ಆದರ್ಶ ತತ್ವಗಳನ್ನು ನಾವು ಪಾಲಿಸಬೇಕೆಂದರು.
ಅದೇ ರೀತಿಯಾಗಿ ಅಫಜಲಪೂರ ಮಾಜಿ ಶಾಸಕ ಮಾಲಿಕಯ್ಯ ವಿ. ಗುತ್ತೇದಾರ ಅವರು ಮಾತನಾಡಿದರು.
ಕಾಶಿ ಪೀಠ, ವಾರಾಣಾಸಿ ಶ್ರೀಮದ್ ಕಾಶಿಜ್ಞಾನ ಸಿಂಹಾಸನಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶ್ರಿವಾಚಾರ್ಯ ಭಗವತ್ಪಾದಂಗಳವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶ್ರೀ ಶಾಂತಲಿಂಗೇಶ್ವರ ಸಂಸ್ಥಾನ ವiಠ ಕಡಗಂಚಿ ಪೀಠಾಧಿಪರಿಗಳಾದ ಪೂಜ್ಯ ಶ್ರೀ ಸ.ಬ್ರ. ವೀರಭದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದರು.
ರಂಗಾಯಣ್ಣ ಉಪನಿರ್ದೇಶಕಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರಿ ಸಹಾಯಕ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಠಾಚಾರದ ತಹಶೀಲ್ದಾರರಾದ ಸೈಯದ್ ನೀಸಾರ ಅಹ್ಮದ್, ಜಗದ್ಗರು ರೇಣುಕಾಚಾರ್ಯ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಶಿವಕಾಂತ ಮಹಾಜನ ಗೌರವ ಅಧ್ಯಕ್ಷ ಅಣ್ಣವೀರಯ್ಯ ಪ್ಯಾಟಿ, ಮಹಿಳಾ ಘಟಕ ಅಧ್ಯಕ್ಷ ಗುರುಬಾಯಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ರವಿಬಿರಾದರ ಶಿವಕಾಂತ ಹರಸೂರಸೇರಿದಂತೆ ಸಮಾಜ ಮುಖಂಡರು ಭಾಗವಹಿಸಿದ್ದರು.