
ಕಾಳಗಿ : ಮಾ.12:ತಾಲೂಕಿನ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಿಂದ ಕಾಳಗಿ ಪಟ್ಟಣದವರೆಗೆ ಹಮ್ಮಿಕೊಂಡ ರೇಣುಕಾಚಾರ್ಯರ ದಿವ್ಯ ಜ್ಯೋತಿ ಯಾತ್ರೆಗೆ ಸಂಸದ ಡಾ. ಉಮೇಶ ಜಾಧವ ಚಾಲನೆ ನೀಡಿದರು.
ಕಾಳಗಿ ಪಟ್ಟಣದಲ್ಲಿ ಮಾಚ್ 19ಕ್ಕೆ ಹಮ್ಮಿಕೊಂಡ ತಾಲೂಕು ಮಟ್ಟದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಅಂಗವಾಗಿ ಶನಿವಾರ ಬೆಳಿಗ್ಗೆ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ಕತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಮಠಾಧಿಶರ ಸಮ್ಮುಖದಲ್ಲಿ ಸಂಸದರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾಚ್ 11 ರಿಂದ 19ರ ವರೆಗೆ ತಾಲೂಕಿನ ಪ್ರತಿ ಹಳ್ಳಿಗಳ ಮೂಲಕ ಕಾಳಗಿ ಪಟ್ಟಣದವರೆಗೆ ರೇಣುಕಾಚಾರ್ಯ ದಿವ್ಯ ಜ್ಯೋತಿ ಜರುಗಲಿದೆ. ಈ ಯಾತ್ರೆಯಲ್ಲಿ ನಾನು ಭಾಗವಹಿಸಲು ಪ್ರಯತ್ನಿಸುವುದಾಗಿ ಹೇಳಿದರು.
ರೇವಣಸಿದ್ದೇಶ್ವರ ಗುಡ್ಡದಲ್ಲಿ ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮರುನಿರ್ಮಾಣ ಮಾಡಲಾದ ರೇವಣಸಿದ್ದೇಶ್ವರ ಮೂರ್ತಿಯನ್ನು ವಾರದೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೇಣುಕಾಚಾರ್ಯ ಜಯಂತೋತ್ಸವ ಸಮಿತಿ ಗೌರವಾಧ್ಯಕ್ಷ ಶರಣಗೌಡ ಪೋಲಿಸ್ ಪಾಟೀಲ ಮಾತನಾಡಿ, ಮಾಚ್ 19ಕ್ಕೆ ಕಾಳಗಿಯಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ತ ರೇವಗ್ಗಿ(ರಟಕಲ್) ಗುಡ್ಡದಿಂದ ರೇಣುಕಾಚಾರ್ಯ ದಿವ್ಯ ಜ್ಯೋತಿ ಯಾತ್ರೆ ಪ್ರಾರಂಭಿಸಲಾಗಿದೆ, ತಾಲೂಕಿನಲ್ಲಿ 9ದಿನಗಳ ಕಾಲ ಜರುಗುವ ದಿವ್ಯ ಜ್ಯೋತಿ ಯಾತ್ರೆಯು ರೇವಗ್ಗಿ ಗುಡ್ಡದಿಂದ ಪ್ರಾರಂಭವಾಗಿ ಅರಣಕಲ್, ರೇವಗ್ಗಿ, ಗೊಣಗಿ, ಭೆಡಸೂರ, ಭೆಡಸೂರ(ಕೆ) ತಾಂಡ, ಭೆಡಸೂರ(ಎಮ್) ತಾಂಡ, ಮುಕರಂಬಾ, ರಟಕಲ್, ಚಿಂಚೋಳಿ(ಎಚ್) ತಾಂಡ, ಚಿಂಚೋಳಿ(ಎಚ್), ಹುಳಗೇರಾ, ಕಂದಗೂಳ, ವಟವಟಿ, ಹೇರೂರ, ಶೆಳ್ಳಗಿ, ಕಲ್ಲಹಿಪ್ಪರಗಿ, ಬಣಬಿ, ಹೆಬ್ಬಾಳ, ಅಶೋಕ ನಗರ, ಕೋರವಾರ, ಕಲಗುರ್ತಿ, ಟೆಂಗಳಿ, ಸಾಲಹಳ್ಳಿ, ಕೊಡದೂರ, ಮಂಗಲಗಿ, ಭೂತಪೂರ, ರುದನೂರ, ಚಿಂತಪಳ್ಳಿ, ಗಡಿಕೇಶ್ವರ, ಹೊಡೆಬಿರನಳ್ಳಿ, ಕೊರವಿ, ಕುಡ್ಡಳ್ಳಿ, ವಜ್ಜರಗಾಂವ, ಪಸ್ತಪೂರ, ಮೋಘಾ, ರುಮ್ಮನಗೂಡ, ಶೆರಿತಾಂಡ, ಕೋಡ್ಲಿ, ನಾವದಗಿ, ಹಲಚೇರಾ, ಹೊಸ್ಸಳ್ಳಿ, ರಾಜಾಪೂರ, ಭರತನೂರ, ಅರಜಂಬಗಾ, ಡೊಣ್ಣೂರ, ಮಲಘಾಣ, ಕಣಸೂರ, ಗೋಟೂರ, ಸೂಗುರ(ಕೆ) ಮೂಲಕ ಕಾಳಗಿ ಪಟ್ಟಣಕ್ಕೆ ತಲುಪುವುದು ಎಂದು ಹೇಳಿದರು.
ಸೂಗುರ(ಕೆ) ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ್ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳು, ಚಂದನಕೇರಾ ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಕೋಡ್ಲಿ ಪೂಜ್ಯ ಬಸವಲಿಂಗ ಶಿವಾಚಾರ್ಯರು, ಜಯಂತೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಕಮಲಾಪೂರ, ಸ್ವಾಗತ ಸಮಿತಿ ಅಧ್ಯಕ್ಷ ಶರಣು ಸಾಲಿಮಠ ಮೋಘಾ, ಶಿವಶರಣಪ್ಪ ಕಮಲಾಪೂರ, ಮುರುಘಯ್ಯಸ್ವಾಮಿ ಮಠಪತಿ ಭರತನೂರ, ರೇವಣಸಿದ್ಧ ಬಡಾ, ಬಸಯ್ಯಸ್ವಾಮಿ ಪ್ಯಾಟಿಮಠ, ಸಿದ್ದುಸ್ವಾಮಿ ಕೊಡದೂರ, ಫಕೀರಯ್ಯ ಸ್ಥಾವರಮಠ, ಶಿವರಾಜ ಪಾಟೀಲ ಗೊಣಗಿ, ವೀರಯ್ಯಸ್ವಾಮಿ ಮಠಪತಿ, ಪ್ರಶಾಂತ ಕದಮ, ಚನ್ನಯ್ಯಸ್ವಾಮಿ ಸಪ್ಪಯಗೋಳ, ಶರಣು ಎಲ್ಮಡಗಿ, ವೀರಯ್ಯಸ್ವಾಮಿ ಮಠಪತಿ, ಶಿವರುದ್ರಯ್ಯ ಸಾಲಿ, ನಾಗರಾಜ ಚಿಕ್ಕಮಠ, ಶರಣಯ್ಯಸ್ವಾಮಿ ಚಿಕ್ಕಮಠ, ಸಂತೋಷ ಜಾಧವ, ನೀಲಕಂಠ ಮಡಿವಾಳ, ಸಂಜುಕುಮಾರ ತೆಳಮನಿ ಸೇರಿದಂತೆ ಇತರರು ಇದ್ದರು.