ರೇಣುಕಾಚಾರ್ಯರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಂಡಾಗ ಶಾಂತಿ

ಕಲಬುರಗಿ,ಮಾ.6-ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ರೇಣುಕರ ತತ್ವವನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಶಾಂತಿ ಸಮಾಧಾನ ಸಿಗಲು ಸಾಧ್ಯ ಸುಂಟನೂರ ಗ್ರಾಮದ ಸಂಸ್ಥಾನ ಹಿರೇಮಠದ ಬಂಡಯ್ಯ ಸ್ವಾಮೀಜಿ ಹೇಳಿದರು.
ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜಗ್ಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಕುಲದ ಕಲ್ಯಾಣಕ್ಕಾಗಿ ಹಲವಾರು ಜನ ಆಚಾರ್ಯರು, ಪ್ರವಾದಿಗಳು ಈ ಭುಮಿಯ ಮೇಲೆ ಅವತರಿಸಿ ಬಂದಿದ್ದಾರೆ. ಅಂತಹ ಪರಂಪರೆಯಲ್ಲಿ ಅವತರಿಸಿದ ಆದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪರಶಿವನ ಆದೇಶದಂತೆ ಈ ಭೂಲೋಕದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿ ವೀರಶೈವ ಧರ್ಮವನ್ನು ನೆಲೆಗೊಳಿಸಿದ್ದಾರೆ. ಜಗದ್ಗುರು ರೇಣುಕಾಚಾರ್ಯರು ಸಮುದಾಯಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿರುವವರು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ರೇಣುಕರ ತತ್ವವನ್ನ ಬದುಕಿನಲ್ಲಿ ಅಳವಡಿಸಿಕೊಂಡಾಗ ಶಾಂತಿ ಸಮಾಧಾನ ಸಿಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಷಣ್ಮುಖಯ್ಯ ಸ್ವಾಮಿ ಸ್ಥಾವರಮಠ, ಮಹಾಲಿಂಗಯ್ಯ ಸ್ವಾಮಿ ಸ್ಥಾವರಮಠ, ವೀರಯ್ಯಸ್ವಾಮಿ ಸ್ಥಾವರಮಠ, ತೀರ್ಥಯ್ಯ ಸ್ವಾಮಿ ಹಾಗೂ ಮಲ್ಲಿಕಾರ್ಜುನ ದೇವಸ್ಥಾನÀ ಸಮಿತಿಯ ಮಹಾಲಿಂಗಪ್ಪ ಹರವಾಳ, ಸಿದ್ದಲಿಂಗ ಬಬಲಾದಿ, ಶ್ರೀಶೈಲ್ ಸ್ವಾಮಿ, ಶಿಕ್ಷಕರಾದ ಅಪ್ಪರಾಯ ಶೀಲವಂತ, ಶಿವಶರಣಪ್ಪ ಕುಂಬಾರ, ಅಕ್ಕನ ಬಳಗದವರಾದ ಶಾಕಂಬರಿ ಸ್ಧಾವರಮಠ, ಸುಗುಲಾಬಾಯಿ ಸ್ಥಾವರಮಠ, ಲಕ್ಷ್ಮೀಬಾಯಿ ಸ್ಧಾವರಮಠ, ಶೋಭಾ ಹಿರೇಮಠ ಹಾಗೂ ಅನೇಕ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದ್ದರು.