ರೇಣುಕಾಚಾರ್ಯರ ತತ್ವಾದರ್ಶ ಪಾಲಿಸಿ: ಮಾರ್ನಾಳ

ಹುಣಸಗಿ,ಮಾ.5-ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ನಿಮಿತ್ಯವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ನ್ಯಾಸಕರಾಗಿ ಮಾತನಾಡಿದ ಎಸ್.ಎಸ್.ಮಾರ್ನಾಳ ಅವರು, ದ್ವೇಷ ಸಾಧಿಸುವವ ಜಂಗಮನಲ್ಲ, ಕರುಣಾಮಯಿ, ಪರೋಪಕಾರಿ, ಸಮಾಜ ಸೇವಕನಾಗುವವ ಜಂಗಮನೆನಿಸಿಕೊಳ್ಳುತ್ತಾನೆ. ಎಲ್ಲ ಸಮಾಜದ ನೆರವನ್ನು ಪಡೆದು ಸದೃಢವಾಗಿ ಬೆಳೆಯಬೇಕು. ಮಕ್ಕಳಿಗೆ ಪಂಚಪೀಠಗಳು, ಪಂಚಾಚಾರ್ಯರು, ಪಂಚಬಣ್ಣಗಳ ಬಗ್ಗೆ ತಿಳುವಳಿಕೆ ನೀಡಿ. ಯುವಕರಿಗೆ ಬದುಕಿನ ಮಾರ್ಗಗಳನ್ನು ಕಲಿಸಿಕೊಡಲಾಗುವುದು. ಜಂಗಮರೆನ್ನಿಸಿಕೊಂಡವರಿಗೆ ಸಮಾಜವನ್ನು ಕಟ್ಟಿ ಬೆಳೆಸುವ ದೊಡ್ಡ ಜವಾಬ್ದಾರಿ ಇದೆ ಎಂದರು.
ಗ್ರೇಡ್ 2 ತಹಸೀಲ್ದಾರ ಮಲ್ಲಯ್ಯ ಸ್ವಾಮೀ ಮಾತನಾಡಿದರು. ಈ ಸಂದರ್ಭದಲ್ಲಿ, ಚೆನ್ನಯ್ಯ ಸ್ವಾಮೀ ಹಿರೇಮಠ, ಬಸವರಾಜಸ್ವಾಮೀ ಸ್ಥಾವರಮಠ, ವಿರೇಶ್ ಬಿ ಚಿಂಚೋಳಿ, ಚಂದ್ರಶೇಖರ ದಂಡಿನ, ಕಿಡಗಣ್ಣಯ್ಯ ಸ್ವಾಮೀ ದೇಸಾಯಿಗುರು, ಬಸವರಾಜ ಮಲಗಲದಿನ್ನಿ, ಎಮ್ ಎಸ್ ಚಂದಾ, ಸಿದ್ದನಗೌಡ ಪಾಟೀಲ್ ಕರೀಭಾವಿ, ಸೋಮಶೇಖರ್ ಸ್ಥಾವರಮಠ, ಶಾಂತಗೌಡ ಪಾಟೀಲ್, ಬಸವರಾಜ ಬಳಿ, ಬಾಪೂಗೌಡ ಪಾಟೀಲ್, ನಾಗಯ್ಯ ಸ್ವಾಮೀ ದೇಸಾಯಿಗುರು, ರವಿ ಪೂರಾಣಿಕ ಮಠ, ಹೊನ್ನಕೇಶವ ದೇಸಾಯಿ, ವಿಜಯಕುಮಾರ ಬಂಡೋಳಿ, ಮಹಾಂತೇಶ್ ಮಲಗಲದಿನ್ನಿ, ಮಲ್ಲಯ್ಯ ಗಣಾಚಾರಿ, ಶಿವಲಿಂಗ ಪಟ್ಟಣಶೆಟ್ಟಿ, ವಿರೇಶ್ ಯಡಿಯೂರಮಠ, ಕಂದಾಯ ಇಲಾಖೆಯ ಸಿಬ್ಬಂದಿಗಳು ಇದ್ದರು. ನಾಗನಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.