ರೇಣುಕಾಚಾರ್ಯರ ತತ್ವಗಳು ಸಮಾಜಕ್ಕೆ ಮಾದರಿ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 6: :  ಜಗದ್ಗುರು ರೇಣುಕಾಚಾರ್ಯರು ಮಾನವನನ್ನು ಮಹಾದೇವನನ್ನಾ ಅಂಗವನ್ನು ಲಿಂಗವನ್ನಾಗಿ ರೂಪಿಸಲು ಅವರು ನೀಡಿದ ತತ್ವ ಬೋಧನೆಗಳು, ತತ್ವಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ. ರೇಣುಕಾಚಾಯೃರು ಸಮಾಜದ ಕೆಳಸ್ತರದ ಅಗಸ್ತ್ಯಮುನಿಗೆ ಬೋಧಿಸಿದ ತತ್ವಗಳೇ ಸಿದ್ದಾಂತ ಶಿಖಾಮಣಿ ಎಂದು ಹೆಸರಾಗಿದೆ. ಧರ್ಮ ಮೇಲ್ವರ್ಗದವರ ಸೊತ್ತಾಗದೇ ಎಲ್ಲಾ ವರ್ಗದವರ ಸೊತ್ತು ಎನ್ನುವುದನ್ನೇ ಪ್ರತಿಪಾದಿಸಲೆಂದೇ ರೇಣುಕಾಚಾರ್ಯರು ಅಗಸ್ತ್ಯನಿಗೆ ಸಿದ್ದಾಂತ ಶಿಖಾಮಣಿಯನ್ನು ಬೋಧಿಸಿದರು. ಇದು ಕೇವಲ ವೀರಶೈವಧರ್ಮಗ್ರಂಥವಲ್ಲ ಇಡೀ ಮಾನವ ಕುಲದ ಧರ್ಮಗ್ರಂಥ, ಈ ಗ್ರಂಥ ಸರ್ವ ಜನಾಂಗದವರ ಏಳಿಗೆಯಾಗಿದೆ ಎಂದು ಸಂಡೂರಿನ ತಹಶೀಲ್ದಾರರು, ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರು ಆದ ಕೆ.ಎಂ. ಗುರುಬಸವರಾಜರು ತಿಳಿಸಿದರು.
ಅವರು ಸಂಡೂರಿನ ತಹಶೀಲ್ದಾರರ ಕಛೇರಿಯಲ್ಲಿ ಬೇಡ ಜಂಗಮ ಕ್ಷೇಮಾಭಿವೃದ್ದಿ ಸಂಸ್ಥೆ ತಾಲೂಕು ಆಡಳಿತದ ಸಹಯೋಗದೊಂದಿಗೆ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕುರಿತು ಮಾತನಾಡಿದರು. ವಿಶ್ವ ಶಾಂತಿಯ ಸಂತ ಜಗದ್ಗುರು ರೇಣುಕಾಚಾರ್ಯರು ಜನತೆಗೆ ಆಧ್ಯಾತ್ಮದ ಭಾವನೆ ಜನರಲ್ಲಿ ತುಂಬಿ ಕಲುಷಿತ ಭಾವನೆಗಳನ್ನು ಸ್ವಚ್ಚಗೊಳಿಸಿ ಶಾಂತಿ ನೆಮ್ಮದಿ ನೀಡುವುದರ ಮೂಲಕ ಮಾನವನನ್ನು ಮಹಾದೇವನನ್ನಾಗಿಸುತ್ತಿದೆ. ಹಾಗಾಗಿ ಜಂಜಾಟದ ಬದುಕಿಗೆ ಆಧ್ಯಾತ್ಮ ಸಂಜೀವಿನಿಯಾಗಿದೆ. ಇದನ್ನು ಅರಿತ ದಾರ್ಶನಿಕರು ಧರ್ಮವಂತರಾಗಿ ಬಾಳಿ ಎಂದು ಬೋಧಿಸಿದರು ಎಂದು ತಿಳಿಸಿದರು.
ಶಿರಸ್ತೇದಾರ ಕೆ.ಎಂ. ಶಿವಕುಮಾರ ಮಾತನಾಡಿ ಮಾನವೀಯತೆಯ ಎಲ್ಲಾ ಅಯಾಮಗಳನ್ನು ವಿವರಿಸಿದೆ. ಪ್ರೀತಿ, ಕರುಣೆ, ಸಹನೆ, ಸಹಕಾಋ ಪರಸ್ಪರ ಗೌರವದಿಂದ ಕಾಣುವ ನೀತಿ ಬೋಧನೆ ಈ ಗ್ರಂಥದಲ್ಲಿದೆ. ವಚನಕಾರರ ಅನೇಕ ವಚಣಗಳಿಗೆ ಈ ಗ್ರಂಥ ಪ್ರೇರಣೆ ನೀಡಿದೆ. ಪ್ರತಿ ಯೋರ್ವರೂ ಈ ಸಿದ್ದಾಂತ ಶಿಖಾಮಣಿಯನ್ನು ತಪ್ಪದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ. ಅದರಂತೆ ನಮ್ಮ ಜೀವನದ ಬದುಕನ್ನು ರೂಪಿಸಿಕೊಳ್ಳುವ ಅವಶ್ಯ ಇದೆ ಅಲ್ಲದೇ ಅನಿವಾರ್ಯತೆ ಇದೆ. ಮಹಾತ್ಮರ ಜಯಂತಿಗಳನ್ನು ಆಚರಿಸುವ ಉದ್ದೇಶ ಜಾತಿಯ ತೋರ್ಪಡಿಕೆಗಲ್ಲ ಪ್ರಚಾರಕ್ಕೆ ಅಲ್ಲ ಮಹಾತ್ಮರಿಂದಲೇ ಜಗತ್ತು ಬೆಳಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಗದ ಅಧ್ಯಕ್ಷ ವಿನಾಯಕ ಹಿರೇಮಠ, ವಿ.ಎಂ. ನಾಗಭೂಷಣ, ಹೆಚ್.ಎಂ. ಶರಣಯ್ಯ, ಚರಂತಯ್ಯ ಹಿರೇಮಠ, ಸಂತೋಷ್ ಕುಮಾರ ಎ.ಎಂ., ಶರಣಯ್ಯ ಸ್ವಾಮಿ, ಎಸ್.ಎಂ. ವಿನಯಕುಮಾರ, ಸರಸ್ವತಮ್ಮ ಗಿರೀಶ್, ಎಂ.ವಿ. ವಿಜಯಲಕ್ಷ್ಮೀ, ಶಾಂತಚರಂತಯ್ಯ ಬಿಕ್ಷಾವತಿ ಮಠ, ಶ್ರೀಧರಗಡ್ಡೆ ಕುಮಾರಸ್ವಾಮಿ , ರವಿಕುಮಾರ ಅಲ್ಲದೆ ಹಲವಾರು ಮಹಾನೀಯರು ಉಪಸ್ಥಿತರಿದ್ದರು. ಅಮರೇಶಯ್ಯಸ್ವಾಮಿ, ಎಂ.ವಿ. ಹಿರೇಮಠ, ವಿ.ಎಂ. ಶರಣಯ್ಯ, ಜೆ.ಎಂ. ಪರಮೇಶ್ವರಯ್ಯ. ಬಿ.ಅರ್.ಸಿ. ಮಹಾಂತೇಷ್, ನಾಗರತ್ನಮ್ಮ ಕೊಟ್ರಯ್ಯ ಸ್ವಾಮಿ.

One attachment • Scanned by Gmail