ರೇಣುಕಾಚಾರ್ಯರ ಜಯಂತ್ಯೋತ್ಸವ ಆಚರಣೆ

ಕಲಬುರಗಿ,ಮಾ.27-ಭಾರತ ಧಾರ್ಮಿಕ ಪರಂಪರೆಯ ರಾಷ್ಟ್ರ, ಈ ದೇಶದ ಸಂಸ್ಕೃತಿ ವಿದೇಶಿಯರಿಗೂ ಆದರ್ಶ ಪ್ರಾಯ, ಮಾನವ ಜನಾಂಗಕ್ಕೆ ವೀರಶೈವ ಧರ್ಮ ಒಂದು ಅಪೂರ್ವ ಕೊಡುಗೆ, ಮಾನವ ಧರ್ಮ ಒಂದೇ ಎಂದು ಸಾರಿದವರು ಜಗದ್ಗುರು ರೇಣುಕಾಚಾರ್ಯರು ಎಂದು ಚಂದ್ರಶೇಖರ ಸಾಲಿಮಠ ಹೇಳಿದರು.
ನಗರದ ಶಹಾಬಜಾರ ಗೋಕುಲ ನಗರದ ಜಿಡಿಎ ಕಾಲೋನಿಯಲ್ಲಿರುವ ಅಕ್ಕ ತಂಗಿ ಶಿವಮಂದಿರ ದೇವಸ್ಥಾನ ಆವರಣದಲ್ಲಿ ರೇಣುಕಾಚಾರ್ಯ ಜಯಂತ್ಯೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಸಹದೇವ ಬಿರಾದಾರ, ಕಲ್ಯಾಣರಾವ ಯಲಮಡಗಿ, ಶ್ರೀಶೈಲ್ ಹೊನ್ನೂರ, ಕರಬಸಪ್ಪ ಅಮರಗೋಳ, ಪರಮೇಶ್ವರ ವರನಾಳ, ಶಿವರಾಯ ಮೂಲಗೆ, ಅಂಬಾರಾಯ ಎಮ್ ಕೋಣೆ, ಚಿದಾನಂದ ಪಾಟೀಲ್ ನೀಲೂರ, ಬಸವರಾಜ ಪೂಜಾರಿ ಅಲ್ಲದೆ ಶಹಾಬಜಾರ ಗೋಕುಲ ನಗರದ ಜಿಡಿಎ ಕಾಲೋನಿಯ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.