ರೇಣುಕಾಚಾರ್ಯರ ಜಯಂತಿ ಯಶಸ್ವಿಗೆ ಸಕಲ ಸಿದ್ಧತೆ

ಕಾಳಗಿ. ಎ.25 : ಕಾಳಗಿ ಪಟ್ಟಣದಲ್ಲಿ ಮೇ. 17 ರಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಜರುಗಲಿದ್ದು, ನಿಮಿತ್ಯವಾಗಿ ಬುಧವಾರ ರೇವಗ್ಗಿ (ರಟಕಲ್) ನ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜಯಂತ್ಯುತ್ಸವ ಪ್ರಚಾರಾರ್ಥ ಭಿತ್ತಿ ಪತ್ರವನ್ನು ಶ್ರೀಗಳ ಸಮ್ಮುಖದಲ್ಲಿ ಜಯಂತ್ಯುತ್ಸವ ಪ್ರಚಾರ ನಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ್ ಕಾಳಗಿ ಹಾಗೂ ರೇಣುಕಾಚಾರ್ಯ ಯುಗಮಾನೋತ್ಸವ ತಾಲೂಕ ಸೇವಾ ನಮಿತಿ ಬಿಡುಗಡೆ ಮಾಡಿದರು.

ನಂತರ ಜಯಂತ್ಯುತ್ಸವ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ್ ಕಾಳಗಿ ಮಾತನಾಡಿ, ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ತಿಳಿಸಿದರು. ಯುಗಮಾನೋತ್ಸವ ಯಶಸ್ವಿಗೆ ಸಮಿತಿ ಪದಾಧಿಕಾರಿಗಳು ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಯುಗಮಾನೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೇಯಬೇಕು ಎಂದು ಹೇಳಿದರು.

ಮೇ.17 ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಶ್ರೀ ಬಸವೇಶ್ವರ ವೃತ್ತ ರಾಮನಗರ ದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಲಿಂಗೋದ್ಭವ ಮೂರ್ತಿಯ ಹಾಗೂ ರಂಭಾಪೂರಿ ಜಗದ್ಗುರುಗಳ ಭವ್ಯ ಮೆರವಣಿಗೆ ಜರುಗುವುದು. ಮೆರವಣಿಗೆಯಲ್ಲಿ
ಮುತ್ತೈದಿಯರ ಕುಂಭ ಕಳನ, ಪುರವಂತರ ಕುಣಿತ, ಡೊಳ್ಳು ಕುಣಿತ, ವೀರಗಾನ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ, ನಂತರ ಕಾಳಗಿ ತಾಲೂಕಿನ ಮಾಠಾಧೀಶರ ನೇತೃತ್ವದಲ್ಲಿ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಜನ ಜಾಗೃತಿ ಧರ್ಮ ಸಭೆ ಜರುಗುವುದು, ತಾಲೂಕಿನ ಎಲ್ಲಾ ಗ್ರಾಮದ ಮುಖಂಡರು, ಸಾರ್ವಜನಿಕರು ಜಯಂತಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಸೂಗೂರು(ಕೆ) ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯ ಆಶೀರ್ವಾಚನ ನೀಡಿ, ಜಗದ್ಗುರು ರೇಣುಕಾರ್ಚಾರ ಜಯಂತಿ ಯುಗಮಾನೋತ್ಸವವು ಅರ್ಥಪೂರ್ಣವಾಗಿ ಆಚರಿಸಬೇಕು, ಜಗದ್ಗುರು ರೇಣುಕಾಚಾರ್ಯರ ಸಂದೇಶಗಳನ್ನು ಅರಿತು ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಹೊಸಳ್ಳಿಯ ಪೂಜ್ಯ ಸಿದ್ದಲಿಂಗ ಶಿವಾಚಾರ್ಯ, ರಟಕಲ್‍ನ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಾಚನ ನೀಡಿದರು. ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ರೇವಣಸಿದ್ದ ಬಡಾ ಮಾತನಾಡಿದರು.

ಸಮಿತಿ ಗೌರವಾಧ್ಯಕ್ಷ ಶಿವರಾಜ ಪಾಟಲ್ ಗೊಣಗಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಮಠ, ಜಂಗಮ ಸಮಾಜದ ತಾಲೂಕಾಧ್ಯಕ್ಷ ಶರಣು ಸಾಲಿಮಠ, ನಿಕಟಪೂರ್ವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಕಮಲಾಪೂರ, ರಾಜಶೇಖರ ಕುಡ್ಡಳ್ಳಿ, ಸೋಮಣ್ಣ ಚಿಂಚೋಳಿಕರ್ ಹಲಚೇರಾ, ಗಂಗಾಧರ ಬಸವನಗುಡಿ, ಗಿರೀಶ ದೇವರಮನಿ, ವೀರಣ್ಣಾ ಗುಗಾಣಿ, ರಾಜಶೇಖರ ಗುಡದಾ, ಜಗಧೀಶ ಮಾಲಿಪಾಟೀಲ, ಅಮೃತ ಪಾಟೀಲ, ಬಸವರಾಜ ಹುಡದಳ್ಳಿ, ಶೇಖರ ಮಾನಶೆಟ್ಟಿ, ರೇವಣಸಿದ್ಧ ಕಲಶೆಟ್ಟಿ, ಮಲ್ಲಿಕಾರ್ಜುನ ಮಳಗಿ, ಚನ್ನಪ್ಪ ಮುಕರಂಬಿ, ಕಲ್ಲಯ್ಯಾಸ್ವಾಮಿ ಸಾಲಿಮಠ, ಕಾಳಪ್ಪ ಖದ್ದರಗಿ, ಮಂಜುನಾಥ ಕುಡ್ಡಳ್ಳಿ, ಗಂಗಾಧರ ಬಸವನಗುಡಿ, ಚಂದ್ರಕಾಂತ ರಾಮಾ, ಚಂದ್ರಕಾಂತ ಸೀಗಿ, ರೇವಣಸಿದ್ಧ ಅರಣಕಲ್ ಇತರರು ಇದ್ದರು.