ರೇಣುಕಾಚಾರ್ಯರ ಆದರ್ಶ ಅಳವಡಿಸಿಕೊಳ್ಳಿ

ದೇವದುರ್ಗ.ಮಾ.೨೮-ಶರಣರು, ಸಂತರು, ದಾಸರು ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಶ್ರೀರೇಣುಕಾಚಾರ್ಯರು ವೀರಶೈವ ಪರಂಪರೆ ಬೆಳೆಸಿದ್ದು, ಅದನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರ ಅದರ್ಶ ಜೀವನದಲ್ಲಿ ಅಳವಡಿಕೊಂಡರೆ ಪರಂಪರೆ ಉಳಿಯಲಿದೆ ಎಂದು ಸಿಂಧನೂರಿನ ಶ್ರೀರಂಭಾಪುರಿಮಠದ ಶ್ರೀಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗಬ್ಬೂರಿನ ಊರೊಳಗಿರುವ ಶ್ರೀಬೂದಿಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಸಮುದಾಯದಿಂದ ಆಯೋಜಿಸಿದ್ದ ಶ್ರೀರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಮುದಾಯ ಶಿಕ್ಷಣ ಪಡೆಯುವ ಮೂಲಕ ಸಂಘಟನೆಯಡಿ ಒಗ್ಗೂಡಬೇಕು ಎಂದು ಹೇಳಿದರು.
ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ಮಸ್ಕಿಯ ಶ್ರೀವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆಂಭಾವಿಯ ಶ್ರೀಚನ್ನಬಸವ ಶಿವಚಾರ್ಯ ಸ್ವಾಮೀಜಿ, ಸುಲ್ತಾನಪುರದ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವನ ನೀಡಿದರು.
ಬೇಜ ಜಂಗಮರ ಸಂಘದ ತಾಲೂಕು ಅಧ್ಯಕ್ಷ ಶ್ರೀಬಸವಲಿಂಗಯ್ಯಸ್ವಾಮಿ ಚಿಕ್ಕಮಠ, ಜಿಪಂ ಮಾಜಿ ಸದಸ್ಯ ಸದಾಶಿವಯ್ಯಸ್ವಾಮಿ ಮಠದ್, ಸಿದ್ದಯ್ಯತಾತ, ಶರಣಯ್ಯಸ್ವಾಮಿ, ಬಸವರಾಜಪ್ಪಗೌಡ, ಸೂಗೂರೆಡ್ಡಿಗೌಡ, ಬಸವರಾಜ ಬೆಳಗುಂದಿ, ಮರಿಗೌಡ ಮಂದಕಲ್, ಶರಣಪ್ಪಗೌಡ, ಸುರೇಶ ಎಲಿ, ಚನ್ನಬಸವ ತಾತ ಇದ್ದರು.

೨೮-ಡಿವಿಡಿ-೧