
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.05 : ಜಂಗಮಕುಲಕ್ಕೆ ಜೋಳಿಗೆ ಕಾಯಕವನ್ನು ಕೊಟ್ಟ ಮೂಲಪುರುಷ ರೇಣುಕಾಚಾರ್ಯರು, ಅಗಸ್ತ್ಯ ಮುನಿಗೆ ಶಿವಸಿದ್ಧಾಂತವನ್ನು ಬೋಧಿಸಿದ್ದರು. ಅವರ ಸಿದ್ದಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದು ನಗರಸಭೆ ಸದಸ್ಯ ಉಮೇಶ ಸಿಂಗನಾಳ ಹೇಳಿದರು. ನಗರದ ತಹಶೀಲ್ ಕಾರ್ಯಾಲಯದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ರೇಣುಕಾರ್ಚಾರರ ಜಯಂತಿ ಕಾರ್ಯಕ್ರಮ ರಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲಾ ಸಮಾಜದ ವಿಶ್ವಾಸವನ್ನು ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ರೇಣುಕಾರ್ಚಾರು ಯುಗ ಯುಗದಲ್ಲಿ ಆವಿರಿಸಿದ ಮಹಾಗುರುಗಳು, ವೀರಶೈವ ಚರ್ಮವನ್ನು ನೆಲೆಗೊಳಿಸಿದ ಮಹಾತ್ಮಾರು ಇವರು ಎಲ್ಲಾ ಧರ್ಮದವರಿಗೆ ಆದರ್ಶ ವಾಗಿದ್ದಾರೆ ಎಂದು ಹೇಳಿದರು. ಈ ವೇಳೆ ಉಪ ತಹಶಿಲ್ದಾರ ಹೆಚ್.ವಿರುಪಾಕ್ಷಪ್ಪ ಹೊರಪೇಟೆ, ಆರ್.ಐ ಮಂಜುನಾಥ, ಮುಖಂಡರಾದ ಮನೋಹರಸ್ವಾಮಿ ಹೇರೂರು, ಹೆಚ್.ಎಂ ಮಂಜುನಾಥ, ರಮೇಶ ಸ್ವಾಮಿ, ಕಲ್ಲಯ್ಯಸ್ವಾಮಿ ಸೇರಿದಂತೆ ಅನೇಕರು ಇದ್ದರು.