ರೇಡಿಯೋ ಶಾಲೆಯಲ್ಲಿ “ಅಂಬೇಡ್ಕರ್ ಮಹಾಪರಿನಿರ್ವಾಣ”ವಿಶೇಷ ಕಾರ್ಯಕ್ರಮ

ಕಲಬುರಗಿ,ಡಿ.3: ಆಕಾಶವಾಣಿ ಕಲಬುರಗಿ ಕೇಂದ್ರದ ಬಾಲಲೋಕದಲ್ಲಿ ಪ್ರಸಾರವಾಗುವ ‘ರೇಡಿಯೋ ಶಾಲೆ’ ಕಾರ್ಯಕ್ರಮದಲ್ಲಿ ಡಿ.5 ರಂದು ಬೆಳಿಗ್ಗೆ 10 ಗಂಟೆಗೆ ‘ಅಂಬೇಡ್ಕರ್ ಮಹಾಪರಿನಿರ್ವಾಣ’ ಪ್ರಯುಕ್ತ ವಿಸೇಷ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.

ರೇಡಿಯೋ ಶಾಲೆಯನ್ನು ಕಮಲಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಡಾ. ಕೆ. ಎಸ್. ಬಂಧು ನಡೆಸಿಕೊಡಲಿದ್ದಾರೆ. ಇವರೊಂದಿಗೆ ಕಲಬುರಗಿಯ ಮಿಲಿಂದ ಪ್ರೌಢ ಶಾಲೆಯ ವಿದ್ಯಾರ್ಥಿ ಕಿರಣ ಹಾಗೂ ಪ್ರಿಯದರ್ಶಿನಿ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸುಜಾತಾ ಮತ್ತು ಶಿವಾನಿ ಭಾಗವಹಿಸಲಿರುವರು. ಈ ಕಾರ್ಯಕ್ರಮವನ್ನೂ ಡಾ. ಸದಾನಂದ ಪೆರ್ಲ ಪ್ರಸ್ತುತ ಪಡಿಸಲಿದ್ದು ಮಲ್ಲಮ್ಮ ಟಿ. ಬುಳ್ಳಾ ಸಂಕಲನ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಮೊಬೈಲನ್ newsonair ಆ್ಯಪ್ ಮೂಲಕ ಆಲಿಸಬಹುದು ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಅನಿಲಕುಮಾರ್ ಎಚ್.ಎನ್. ತಿಳಿಸಿದ್ದಾರೆ.