ರೇಡಿಯೋ ಕಿಸಾನ್ ದಿವಸ-ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ

ದಾವಣಗೆರೆ; ಮಾ.16; ಹಸಿವು ಮತ್ತು ಅಪೌಷ್ಟಿಕತೆಯ ನಿವಾರಣೆ ಮಾಡುವಲ್ಲಿ ಶಕ್ತಿಯುತ ಪಾತ್ರ ವಹಿಸುವ ಸಿರಿಧಾನ್ಯಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲಾಗುತ್ತದೆ ಎಂದು  ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ಎನ್ ದೇವರಾಜ್ ಹೇಳಿದರು.  ಆಕಾಶವಾಣಿ ಚಿತ್ರದುರ್ಗ ಹಾಗೂ ಐ.ಸಿ.ಇ.ಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ತರಳಬಾಳು  ಕೃಷಿ ವಿಜ್ಞಾನ ಕೇಂದ್ರದಲ್ಲಿ  ಬುಧವಾರ ಜರುಗಿದ ರೇಡಿಯೋ ಕಿಸಾನ್ ದಿವಸ್  ಹಾಗೂ ಅಂತರಾಷ್ಟ್ರೀಯ ಸಿರಿಧಾನ್ಯಗಳ ವμರ್Áಚರಣೆ 2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.2023 ರನ್ನು ಸರ್ಕಾರ  ರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಕರೆಯಲಾಗಿದೆ. ಏμÁ್ಯದ ಒಟ್ಟು ಉತ್ಪಾದನೆಯಲ್ಲಿ ಭಾರತವು ಶೇ.80ರಷ್ಟು ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದೆ. ಇಡೀ ಪ್ರಪಂಚಾದ್ಯಂತ ಭಾರತದಲ್ಲಿ 17.5 ಟನ್‍ನಷ್ಟು ಸಿರಿ ಧಾನ್ಯಗಳನ್ನು ಬೆಳೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇ.70 ರಷ್ಟು ಜಮೀನುಗಳು ಒಣ ಭೂಮಿ ಇದ್ದು ಸಿರಿಧಾನ್ಯ ಬೆಳೆಯುವುದಕ್ಕೆ ಯೋಗ್ಯವಾಗಿವೆ. ಸಿರಿಧಾನ್ಯ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಮಾರುಕಟ್ಟೆ ಇವೆಲ್ಲವನ್ನು ಪರಿಗಣಿಸಿ ಸಿರಿ ಧಾನ್ಯಗಳನ್ನು ಬೆಳೆಯುತ್ತಿರುವುದು ಸಹಕಾರಿಯಾಗಿದೆ ಎಂದರು.ಕೊರೋನದ ನಂತರ ಸಿರಿಧಾನ್ಯಗಳ ಪ್ರಾಮುಖ್ಯತೆ ಹೆಚ್ಚಾಗಿದೆ. ಪ್ರಪಂಚದಲ್ಲಿ 130 ದೇಶಗಳು ಸಿರಿ ಧಾನ್ಯಗಳನ್ನು ಬೆಳೆಯುವಲ್ಲಿ ತಮ್ಮದೇ ಆದ ಛಾಪು ಮೂಡಿಸಿವೆ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಆದಾಯ ಗಳಿಕೆ ಹೆಚ್ಚಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಪ್ರತಿಯೊಂದು ಮನೆಯಲ್ಲೂ ಡಯಾಬಿಟಿಸ್ ರೋಗಿಗಳಿದ್ದಾರೆ ಅವರಿಗೆ ಮೂಲ ಮದ್ದು  ಸಿರಿಧಾನ್ಯಗಳೆನ್ನಬಹುದು. ಸಿರಿ ಧಾನ್ಯಗಳ ಉತ್ಪಾದನೆ ಮಾಡುವುದು ಎಷ್ಟು ಮುಖ್ಯವೋ ಬಳಕೆ, ಮೌಲ್ಯವರ್ಧನೆ ಮಾಡುವುದು ಅμÉ್ಟೀ ಮುಖ್ಯ ಎಂದರು.ಜಿಲ್ಲಾ ಕೃಷಿ ಉಪ ನಿರ್ದೇಶಕ ತಿಪ್ಪೇಸ್ವಾಮಿ ಆರ್ ಮಾತನಾಡಿ, ಆಕಾಶವಾಣಿಯು ರೈತರಿಗೋಸ್ಕರ ಕಿಸಾನ್ ದಿವಸ್ ಎಂಬ ಕಾರ್ಯಕ್ರಮ ರೂಪಿಸಿದೆ. ತಳಿ, ಬೆಳೆ, ರೋಗಗಳ ಬಗ್ಗೆ ಆಕಾಶವಾಣಿಯು  ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಹಾಗೂ ರೆಡಿಯೋ ಮಾಧ್ಯಮಕ್ಕೂ ಅವಿನಾಭವ ಸಂಬಂಧವಿದೆ. ಆಕಾಶವಾಣಿ ಏಕಾಗ್ರತೆ ಕಡೆಗೆ ಹಾಗೂ ಭಾμÁಜ್ಞಾನದ ಕಡೆಗೆ ಸೆಳೆಯುತ್ತದೆ.  ಹಾಗೆ ಸಿರಿಧಾನ್ಯಗಳನ್ನು ಬೆಳೆಯುವಂತ ರೈತರಿಗೆ ಈಒಈಒಇ ಯೋಜನೆಯಡಿಯಲ್ಲಿ ರೂ. 2000ಗಳನ್ನು ನೇರಾವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಆರೋಗ್ಯ ಸಮಸ್ಯೆಗೆ ಸಿರಿಧಾನ್ಯವು ತನ್ನದೇ ಆದ ಪ್ರಾಮುಖ್ಯತೆ ನೀಡಿದೆ ಎಂದರು.