ರೇಡಿಯಂ ಅಂಟಿಸಿ ಚಾಲಕರಲ್ಲಿ ಜಾಗೃತಿ

ಅಫಜಲಪುರ:ಆ.20: ತಾಲೂಕಿನ ಚವಡಾಪುರ, ಗಾಣಗಾಪುರ ಹಾಗೂ ಮತ್ತಿತರ ಸ್ಥಳಗಳಲ್ಲಿ ವಾಹನಗಳಿಗೆ ರೇಡಿಯಂ ಅಂಟಿಸಿ ಚಾಲಕರಲ್ಲಿ ರಸ್ತೆ ಸಂಚಾರಿ ನಿಯಮ ಪಾಲನೆಗೆ ಜಾಗೃತಿ ಮೂಡಿಸಲಾಯಿತು.

ನಂತರ ಸಿಪಿಐ ಪಂಡಿತ ಸಗರ್ ಮಾತನಾಡಿ, ರಸ್ತೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ. ವಾಹನ ಚಲಾಯಿಸುವಾಗ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸಬೇಕು. ವಾಹನಗಳಿಗೆ ರೇಡಿಯಂ ಅಂಟಿಸಿದರೆ ವಿಶೇಷವಾಗಿ ರಾತ್ರಿ ಸಮಯದಲ್ಲಿ ಹಿಂಬದಿಯ ಸವಾರರು ಜಾಗೃತಿಯಿಂದ ವಾಹನ ಚಲಾಯಿಸುತ್ತಾರೆ. ಡ್ರೈವಿಂಗ್ ಲೈಸನ್ಸ್, ವಿಮೆ ಮುಂತಾದ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಕುಡಿದು ವಾಹನ ಚಲಾಯಿಸಬಾರದು ಎಂಬಿತ್ಯಾದಿ ನಿಯಮಗಳನ್ನು ಪಾಲಿಸಲು ಸೂಚಿಸಿದ ಅವರು ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.