ರೇಕುಳಗಿ: 100 ಅರಳಿ ಸಸಿಗಳು ನೆಡುವ ಕಾರ್ಯಕ್ಕೆ ಚಾಲನೆ

ಬೀದರ:ಜೂ.7: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್‍ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ನೂರು ಅರಳಿ ಸಸಿ ನೆಡುವಿಕೆಗೆ ಶನಿವಾರ ಚಾಲನೆ ನೀಡಲಾಯಿತು.

ಬೌದ್ಧ ವಿಹಾರದ ಭಂತೆ ರೇವತ, ಭಂತೆ ಧರ್ಮಪಾಲ್, ಭಿಕ್ಕುಣಿ ಪ್ರಜಾಪತಿ ಅವರು ಸಾಂಕೇತಿಕವಾಗಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ವಿನೋದಕುಮಾರ ಎಸ್, ಅವಿನಾಶ ದಂಡಿನ್, ರಾಹುಲ್ ದಂಡಿನ್, ರಾಜು ಇಟಕರಿ, ರಾಜು ಶರ್ಮಾ ಇದ್ದರು.