ರೇಕುಲಗಿಯಲ್ಲಿ ನರೇಗಾ ನಡೆ ಸುಸ್ಥಿರತೆ ಕಡೆಗೆ ಕಾರ್ಯಕ್ರಮ

ಬೀದರ್: ಅ.19:ತಾಲೂಕಿನ ರೇಕುಲಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ 2024-25ನೇ ಸಾಲಿನ ಆಯವ್ಯಯ ವಿವಿಧ ಇಲಾಖೆಯಡಿ ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿ ಮತ್ತು ಸಮುದಾಯ ಕಾಮಗಾರಿಗಳ ಪಟ್ಟಿ ತಯಾರಿಸುವ ಉದ್ದೇಶದಿಂದ ನರೇಗಾ ನಡೆ ಸುಸ್ಥಿರತೆ ಕಡೆಗೆ ಎಂಬ ಅಭಿಯಾನಕ್ಕೆ ಗ್ರಾಮ ಪಂಚಾಯತ ಸದಸ್ಯರಾದ ಮಹೇಶ್ ಹಚ್ಚಿ ಅವರು ಚಾಲನೆ ನೀಡಿದರು.
ತಾಲೂಕ ಪಂಚಾಯತ್ ಕಾರ್ಯನಿರ್ವಾಕ ಅಧಿಕಾರಿಗಳಾದ ಕಿರಣ್ ಪಾಟೀಲ್ ಅವರ ಸೂಚನೆ ಮೇರೆಗೆ ಮನೆ ಮನೆಗೆ ಜಾಥಾ ಹಮ್ಮಿಕೊಂಡು ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಬೇಡಿಕೆ ಪಡೆಯಲಾಯಿತು ಹಾಗೂ ನರೇಗಾ ಯೋಜನೆಯ ಲಾಭದ ಬಗ್ಗೆ ಗ್ರಾಮ ಪಂಚಾಯತ ಸದಸ್ಯರಾದ ಮಹೇಶ್ ಹಚ್ಚಿ ಮಾಹಿತಿ ನೀಡಿದರು.
ರಮೇಶ್ ಮೇತ್ರಿ ಹಾಗೂ ಗ್ರಾಮಸ್ಥರಾದ ಮಹಾಂತೇಶ್ ಎಮ್ ಅವರು ನರೇಗಾ ಯೋಜನೆ ಲಾಭದ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಕಾರ್ಮಿಕರಾದ ಲಕ್ಷ್ಮಣ, ಕಲ್ಲಮ್ಮ ಮನೋಹರ್, ಐಇಸಿ ಸಂಯೋಜಕರಾದ ಸತ್ಯಜೀತ ನೀಡೋದಿಕರ್ ಸದಸ್ಯರು, ಮೇಟಿ ಹಾಗೂ ಸಿಬ್ಬಂದಿ ಹಾಜರಿದ್ದರು.