ರೆಮ್‍ಡಿಸಿವಿರ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ವಿಜಯಪುರ ಮೇ 3 : ಅಕ್ರಮವಾಗಿ ರೆಮ್‍ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ
ಇಬ್ಬರು ಆರೋಪಿಗಳನ್ನು ನಗರದಲ್ಲಿ ಪೆÇಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಸವನಗರ ಬುರಣಾಪುರದ ಶ್ರೀಧರ ದಾನಪ್ಪ ಪಟ್ಟಣಶೆಟ್ಟಿ, ದ್ಯಾಬೇರಿಯ ವಿಠಲ ಮದನ ಬಿರಾದಾರ ಬಂಧಿತ ಆರೋಪಿಗಳು.
ಈ ಆರೋಪಿಗಳು ರೆಮ್‍ಡಿಸಿವಿರ್ ಔಷಧಿಯನ್ನು 3,400ರೂ.ಗಳಿಗೆ ಪಡೆದುಕೊಂಡು, ಅಕ್ರಮವಾಗಿ 26,000 ರೂ.ಗಳಿಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, 2 ರೆಮ್‍ಡಿಸಿವಿರ್ ಔಷಧಿ
ಬಾಟಲಿಯನ್ನು ಜಪ್ತಿ ಮಾಡಲಾಗಿದೆ.ಈ ಸಂಬಂಧ ಗೋಳಗುಮ್ಮಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.