ರೆಮ್ಡೆಸಿವಿರ್ ಅಕ್ರಮ ಮಾರಾಟ ಯತ್ನ: ಐವರ ಬಂಧನ

ವಿಜಯಪುರ ಏ 30: ಮಹಿಳೆ ಮುಂದೆ ಬಿಟ್ಟು ರೆಮ್ಡೆಸಿವಿರ್ ಔಷಧ ಮಾರಾಟಕ್ಕೆಯತ್ನಿಸಿದ 5 ಜನ ಆರೋಪಿಗಳನ್ನು ನಗರದಲ್ಲಿ ಪೆÇಲೀಸರು ಬಂಧಿಸಿದ್ದಾರೆ.
ಇಲ್ಲಿನ ಆನಂದರುಣವಾಲ್, ಆದಿತ್ಯಜೋಶಿ, ವಿಜಯದೇಶಪಾಂಡೆ, ಶೃತಿಹಡಪದ, ಮಹ್ಮದಅಬ್ದುಲ್‍ಆಲಂ ಮುಲ್ಲಾ ಬಂಧಿತ ಆರೋಪಿಗಳು.ಈ ಆರೋಪಿಗಳು ಅಕ್ರಮವಾಗಿ ದುಪ್ಪಟ್ಟು ಹಣಕ್ಕೆಔಷಧಮಾರಾಟಕ್ಕೆ ಯತ್ನಿಸಿದ್ದು, ಬಂಧಿತರಿಂದ 3490 ರೂ ಮೌಲ್ಯದ ಎರಡು ರೆಮ್ಡೆಸಿವಿರ್ ಔಷಧೀಯ ಬಾಟಲ್ ಹಾಗೂ ನಾಲ್ಕು ಮೊಬೈಲ್ಗಳು ಸೇರಿದಂತೆ ಸುಮಾರು 22, 980 ಮೌಲ್ಯದ ವಸ್ತುಗಳನ್ನು ಗೋಳಗುಮ್ಮಟ್ ಪೆÇಲೀಸರು ಜಪ್ತಿ ಮಾಡಿದ್ದಾರೆ.ಗೋಳಗುಮ್ಮಟ್ ಪೆÇಲೀಸ್ ಇನಾಮದಾರಗೆ ರೆಮ್ಡೆಸಿವಿರ್ ಔಷಧ ನೀಡುವುದಾಗಿ ಆರೋಪಿ ಶೃತಿ ಹೇಳಿದ್ದು, ಇಲ್ಲಿನ
ಮನಗೂಳಿ ಅಗಸಿ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ
ಪೆÇಲೀಸರು ದಾಳಿ ನಡೆಸಿ ಐವರ ಬಂಧನ ಮಾಡಿದ್ದಾರೆ.
ಗೋಳಗುಮ್ಮಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.