ರೆಮ್ಡಿಸಿವಿರ್ ಅಕ್ರಮ ಮಾರಾಟ:ಓರ್ವನ ಬಂಧನ

ವಿಜಯಪುರ ಮೇ ೨:ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಇಟ್ಟುಕೊಂಡು ೨೨,೦೦೦ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ರಾಕೇಶ ಹಣಮಂತಹಲಗಣಿ ಬಂಧಿತ ಆರೋಪಿ.ಈತನು ರೆಮ್ಡಿಸಿವಿರ್ ಔಷಧಿಯನ್ನು
ಅಕ್ರಮವಾಗಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಮೇರೆಗೆ, ನಗರದ ದಾತ್ರಿ ಮಸೀದಿ ಹತ್ತಿರ ಪೊಲೀಸರು ದಾಳಿನಡೆಸಿ ಆರೋಪಿಯನ್ನು ಬಂಧಿಸಿದ್ದು, ೨ರೆಮ್ಡಿಸಿವಿರ್ ಔಷಧಿಬಾಟಲಿಯನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಧನ್ವಂತರಿ ಆಸ್ಪತ್ರೆಸ್ಟಾಪ್ ನರ್ಸ್ ರೂಪಾಲಿ ರಾಕೇಶ ಹಲಗಣಿ, ಶೋಭಾ ಭೀಮಣ್ಣತಳವಾರ ಎಂಬುವವರನ್ನು ಪೊಲೀಸರು ವಿಚಾರಣೆಗೆಒಳಪಡಿಸಿದ್ದಾರೆ.ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ