ರೆಮ್ಟಿಸಿವೆರ್ ಔಷಧಿ ವಿತರಣೆ: ಜಿಲ್ಲೆಗೆ ತಾರತಮ್ಯ-ಆರೋಪ

ಕೊರೊನಾ : ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ-ರಾಜ್ಯ ಸರಕಾರ ವಿಫಲ
ರಾಯಚೂರು. ಮೇ.೧.ಕೊರೊನಾ ಎರಡನೇ ಅಲೆಗೆ ಜನ ಜೀವನ ಅಸ್ತವ್ಯಸ್ತಗೊಳ್ಳವಂತೆ ಮಾಡಿದ್ದು, ಜನರಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವಲ್ಲಿ ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ. ವಿ. ನಾಯಕ ಅವರು ಆರೋಪಿಸಿದರು.
ಅವರಿಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಜಿಲ್ಲೆಯಲ್ಲಿ ರೆಮ್‌ಡಿಸಿವಿಯರ್ ಔಷಧಿಯ ಕೊರತೆ ತೀವ್ರವಾಗಿದೆ. ಜೀವ ರಕ್ಷಕ ರಮ್ಡಿಸಿವೆರ್ ನೀಡುವಲ್ಲ ರಾಜ್ಯ ಸರಕಾರ ರಾಜಕೀಯ ಮಾಡುತ್ತಿದೆ. ಜಿಲ್ಲೆಗೆ ಪ್ರತಿನಿತ್ಯ ೨೦೦ ರೆಮ್ಡಿಸಿವೆರ್ ಅಗತ್ಯವಿದೆ. ಆದರೆ ಜಿಲ್ಲೆಗೆ ನೀಡುವ ಪ್ರಮಾಣ ಅತಿ ಕಡಿಮೆಯಾಗಿದೆ. ಇದರಿಂದ ಕೊರೊನಾ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗಿದೆ ಎಂದು ಹೇಳಿದರು.
ಕೊರೊನ ಎರಡನೇ ಅಲೆಯಲ್ಲಿ ಜನರು ಯಾತನೆ ಅನುಭವಿಸುತ್ತಿದ್ದು ಆಸ್ಪತ್ರೆಯ ಸಿಬ್ಬಂದಿ ವರ್ಗ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ,ಕೋವಿಡ್ ವಾರಿಯರ್ಸ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ.
ಕೋವಿಡ್ ಸಮಸ್ಯೆಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಜಿಲ್ಲೆಗೆ ಆಗಮಿಸಿ ಸಭೆನಡೆಸುತ್ತಿದ್ದಾರೆ. ಸವದಿ ಅವರು ಬೆಳಗಾವಿ ಜಿಲ್ಲೆಗೆ ನೀಡಿದ ಆದ್ಯತೆಯನ್ನು ನಮ್ಮ ಜಿಲ್ಲೆಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ವಿದಿಸಿದ್ದು ಮದ್ಯದ ಅಂಗಡಿಗಳಿಗೆ ಕೇಸ್ ಹಾಕದೆ ಸಣ್ಣ ಪುಟ್ಟ ವ್ಯಾಪಾರಿಗಳ ಮೇಲೆ ಕೇಸ್ ಹಾಕಿದ್ದಾರೆ. ಇವರು ಹೊಟ್ಟೆಪಾಡಿಗಾಗಿ ದುಡಿಯುವ ಜನ ಕೆಲಸ ಮಾಡುತ್ತಾರೆ ಇವರಿಗೆ ಕೇಸ್ ಹಾಕಿದರೆ ತೊಂದರೆಯನ್ನು ಅನುಭವಿಸುತ್ತಾರೆ
ದೇಶದಲ್ಲಿ ೩೭ವರ್ಷದ ಬಳಿಕ ಜನತೆ ಮೋದಿ ಸರ್ಕಾರಕ್ಕೆ ಬಹುಮತವನ್ನು ನೀಡಿದೆ ಆದರೆ ಇವರು ಕೇವಲ ಬಣ್ಣದ ಮಾತುಗಳು ಅಡುತ್ತಿದ್ದಾರೆ ಇವರು ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಕೋವಿಡ್ ರೋಗವನ್ನು ತಡೆಯಲು ಬಿಜೆಪಿ ಸರ್ಕಾರವು ಸ್ಪಷ್ಟವಾಗಿ ಎಡವಿದೆ ಇದರಿಂದ ಜನರು ಛಿಮಾರಿ ಹಾಕುತ್ತಿದ್ದಾರೆ.
ಲಾಕ್ ಡೌನ್ ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ರೈತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮತಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದ್ದರು ಜಿಲ್ಲೆಯಲ್ಲಿ ವ್ಯಪಾರ ವಹಿವಾಟು ಸ್ಥಗಿತಕ್ಕೆ ಆದೇಶಿಸಲಾಗಿದೆ. ಇದು ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುವಂತೆ ಮಾಡಿದೆ. ಸರಕಾರದ ಮಾರ್ಗ ಸೂಚಿಗಳನ್ನು ಸಮರ್ಪಕವಾಗಿ ಪಾಲಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ಔಷಧ ಕೊರತೆ ಇದ್ದರು ಈ ಪರಸ್ಥಿತಿ ಸರ್ಕಾರ ಸಂಪೂರ್ಣವಾಗಿ ಮರೆ ಮಾಚುತ್ತಿದೆ ಇದೊಂದು ತುಗಲಕ್ ಸರ್ಕಾರವಾಗಿದ್ದು ಕೊಡಲೇ ಈ ಸರ್ಕಾರ ಕೂಡಲೇ ವಿಸರ್ಜನೆ ಮಾಡಲಿ ಎಂದು ಹೇಳಿದರು.
ನಂತರ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ ಮಾತನಾಡುತ್ತ ಕೋವಿಡ್ ಎರಡನೇ ಅಲೆಯಲ್ಲಿ ಜನರಿಗೆ ಮೆಡಿಸನ್ ವಿಚಾರದಲ್ಲಿ ಕಳೆದ ಬಾರಿ ನಮ್ಮ ಎನ್ ಎಸ್ ಬೋಸರಾಜ ಪೌಂಡೇಶನ್ ವತಿಯಿಂದ ಸಹಾಯ ಮಾಡಲಾಗಿತ್ತು ಈ ಆಂಬುಲೆನ್ಸ್ ಸಹಾಯ ಮಾಡಲು ಚಿಂತನೆ ಇದೆ. ಫೀವರ್ ಕ್ಲಿನಿಕ್‌ಗಳ ಮುಂದಿಟ್ಟಿದ್ದೇವೆ ಇವುಗಳನ್ನು ಖಾಸಗಿಯಾಗಿ ಮಾಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇದ್ದು ನವೋದಯ ಆಸ್ಪತ್ರೆಯ ಅಧ್ಯಕ್ಷರು ಎಸ್ ಆರ್ ರೆಡ್ಡಿ ಅವರ ಹತ್ತಿರ ಮಾತನಾಡಲಾಗಿದ್ದು ಈ ಆಸ್ಪತ್ರೆಯಲ್ಲಿ ೨೦೦ ಬೆಡ್ ಗಳ ಲಭ್ಯವಿದೆ ಎಂದರು.
ಕಲ್ಬುರ್ಗಿ ಸಂಸದ ಡ್ರಗ್ ಕಂಟ್ರೋಲರ್ ಹತ್ತಿರ ದಬ್ಬಾಳಿಕೆ ಮೂಲಕ ರೆಮ್‌ಡಿಸಿವಿಯರ್ ತೆಗೆದುಕೊಂಡು ಹೋಗಿದ್ದಾರೆ.
ಆದರೆ ನಮ್ಮ ಜಿಲ್ಲೆಯಲ್ಲಿ ರೆಮ್ ಡಿಸಿವಿಯರ್ ಔಷಧಿ ದೊರೆಯದೆ ಜನ ತತ್ತರಿಸುತ್ತಿದ್ದಾರೆ ನಮ್ಮ ಜಿಲ್ಲೆಗೆ ಕೊಡಲೇ ರೆಮ್ ಡಿಸಿವಿಯರ್ ನೀಡಿಬೇಕು
ಬಳ್ಳಾರಿ ಪಾಲಿಕೆ ಚುನಾವಣೆಗಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗಳನ್ನು ಪಡೆದಿದೆ ಇದು ಮುಂದಿನ ಚುನಾವಣೆಯಲ್ಲಿ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ್ ರೆಡ್ಡಿ,ನರಸಿಂಹಲು ಮಾಡಗಿರಿ,ಜಿಂದಪ್ಪ,ಅರುಣ ದೋತರಬಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.