ರೆಮಿಡಿಸಿವಿರ್ ಉತ್ಪಾದನೆ ಹೆಚ್ಚಳ: ದರ ಇಳಿಕೆಗೆ ಕೇಂದ್ರ‌ ನಿರ್ಧಾರ

ನವದೆಹಲಿ,ಏ.14- ಕೊರೊನಾ ರೋಗ ನಿರೋಧಕ ಔಷಧಿಯಾದ ರೆಮಿಡಿಸಿವಿರ್ ಉತ್ಪಾದನೆ ಹಾಗೂ ಪೂರೈಕೆ ಹೆಚ್ಚು ಮಾಡುವುದರ ಜೊತೆಗೆ ಬೆಲೆಯನ್ನು ಕಡಿಮೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.,

ರೆಮಿಡಿಸಿವಿರ್ ಉತ್ಪಾದನೆ ಮಾಡುವ ಸಲುವಾಗಿ ದೇಶಾದ್ಯಂತ 7 ಕಡೆಗಳಲ್ಲಿ ಹೆಚ್ಚುವರಿಯಾಗಿ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗಿದ್ದು, ಪ್ರತಿ ತಿಂಗಳು 10 ಲಕ್ಷ ಬಾಟಲಿ ಔಷಧಿ ಮತ್ತು ಚುಚ್ಚುಮದ್ದು ಉತ್ಪಾದಿಸುವಂತೆ ಉತ್ಪಾದಕರಿಗೆ ಸೂಚಿಸಲಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸೂಕ್ ಮಾಂಡವೀಯ ಮಾತನಾಡಿ
ದೇಶದಲ್ಲಿ ಸದ್ಯ 7 ಔಷಧ ಉತ್ಪಾದಕ ಸಂಸ್ಥೆಗಳಿಂದ 38 ಲಕ್ಷ 80 ಸಾವಿರ ಬಾಟಲಿ ಔಷಧಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

30 ಲಕ್ಷ ಬಾಟಲ್‍ಗಳು ಹೆಚ್ಚುವರಿಯಾಗಿ ಪ್ರತಿ ತಿಂಗಳು ಉತ್ಪಾದನೆಯಾಗಲಿದೆ. ಇದರಿಂದಾಗಿ ರೆಮಿಡಿಸಿವಿರ್ ಪ್ರತಿ ತಿಂಗಳು ಒಟ್ಟಾರೆ 78 ಲಕ್ಷ ಬಾಟಲ್ ಸಾಮಥ್ರ್ಯವನ್ನು ಹೊಂದಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ರೆಮಿಡಿಸಿವಿರ್ ದೇಶೀಯ ಬಳಕೆಗೆ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಚುಚ್ಚುಮದ್ದು ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು.

3500 ರೂಗೆ ಇಳಿಕೆ:

ಕೋವಿಡ್ ವಿರುದ್ಧದ ಹೋರಾಟ ಮಾಡುವ ಸಲುವಾಗಿ ರೆಮಿಡಿಸಿವಿರ್ ಔಷಧಿಯ ಬೆಲೆಯನ್ನು ವಾರಾಂತ್ಯದ ವೇಳೆಗೆ 3500 ರೂಪಾಯಿಗೆ ಇಳಿಸಲು ಔಷಧ ತಯಾರಿಕಾ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಮುಂದಾಗಿದೆ ಎಂದು ರಾಸಾಯನಿಕ ರಸಗೊಬ್ಬರ ಸಚಿವಾಲಯ ತಿಳಿಸಿದೆ.

ಆದ್ಯತೆ ಮೇರೆಗೆ ಆಸ್ಪತ್ರೆಗಳು ಮತ್ತು ಸಂಸ್ಥೆಗಳಿಗೆ ರೆಮಿಡಿಸಿವಿರ್ ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಇದರ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಭಾರತೀಯ ಔಷಧ ಮಹಾ ನಿಯಂತ್ರಕ –ಡಿಜಿಸಿಐಗೆ ಸೂಚನೆ ನೀಡಲಾಗಿದೆ