ರೆಮಿಡಿಸಿವಿರ್ ಅಡ್ಡಪರಿಣಾಮ ತಜ್ಞರ ಎಚ್ಚರಿಕೆ


ನವದೆಹಲಿ,ಏ.೨೪-ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಹಕಾರಿ ಎಂದು ಭಾವಿಸಿರುವ ರೆಮಿಡಿಸಿವಿರ್ ಚುಚ್ಚುಮದ್ದಿಗೆ ದೇಶದಲ್ಲಿ ಬಾರಿ ಬೇಡಿಕೆ ಹೆಚ್ಚಾಗಿರುವ
ನಡುವೆಯೇ ಇದರಿಂದ ಅಡ್ಡ ಪರಿಣಾವೂ ಜಾಸ್ತಿ ಎಂದು ತಜ್ಞರು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದಾರೆ.
ಇತರೆ ಔಷಧಿ ಮತ್ತು ಚುಚ್ಚುಮದ್ದಿನಂತೆ ರೆಮಿಡಿಸಿವಿರ್ ಔಷಧಿಯಲ್ಲಿಯೂ ಅಡ್ಡ ಪರಿಣಾಮಗಳಿವೆ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮಾತ್ರ ಪಡೆಯಬೇಕು ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೆಪಟೈಸಿಸ್-ಸಿ ಗಾಗಿ ಅಭಿವೃದ್ಧಿ ಪಡಿಸಿದ ಔಧಿಯನ್ನು ಎಬೋಲಾ ಮತ್ತು ಮಾರ್ಬಗೂ ಬಳಕೆ ಮಾಡಲಾಗಿತ್ತು. ಇದೀಗ ಕೊರೊನಾ ಸೋಂಕಿತರಿಗೂ ರೆಮಿಡಿಸಿವಿರ್ ಬಳಕೆ ಮಾಡಲಾಗುತ್ತಿದೆ.
ದೇಶದಲ್ಲಿ ನಿತ್ಯ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೆಮಿಡಿಸಿವಿರ್‍ಗಾಗಿ ಬೇಡಿಕೆ ಹೆಚ್ಚಾಗಿದೆ. ಈ ನಡುವೆಯೇ ತಜ್ಞರು ಇಂತಹ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಕೋವಿಡ್ ಸೋಂಕಿತರು ರೆಮಿಡಿಸಿರ್ ಔಷಧಿ ತೆಗೆದುಕೋಮಡ ನಂತರ ಕುಸಿದು ಬಿದ್ದ ಅನೇಕ ಉದಾಹರಣೆಗಳಿವೆ. ವೈದ್ಯರ ಸಲಹೆ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.ಇಲ್ಲದಿದ್ದರೆ ಸಮಸ್ಯೆ ಎದುರಾಗಲಿದೆ ಎಂದು ದೆಹಲಿಯ ಮೌಲಾನಾ ಅಜದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಮತ್ತು ಪ್ರಾದ್ಯಾಪಕ ಡಾ. ನರೇರ್ಶ ಗುಪ್ತ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ:
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ರೆಮಿಡಿಸಿವಿರ್ ಅಷ್ಟೇನು ಸುರಕ್ಷಿತವಲ್ಲ ಎಂದು ಎಚ್ಚರಿಕೆ ನೀಡಿದೆ. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರುವ ಕೊರೊನಾ ಸೋಂಕಿತರಿಗೆ ರೆಮಿಡಿಸಿವಿರ್ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದೆ ಎಂದು ಡಾ ನರೇರ್ಶ ಗುಪ್ತ ತಿಳಿಸಿದ್ದಾರೆ.
ರೆಮಿಡಿಸಿವಿರ್ ಜೀವ ಉಳಿಸಲೆಂದು ತೆಗೆದುಕೊಂಡರೆ ಅದು ಜೀವಕ್ಕೆ ಕಂಟಕ ತರಲಿದೆ.ಹೀಗಿ ಎಚ್ಚರಿಕೆಯಿಂದ ಈ ಲಸಿಕೆ ಮತ್ತು ಚುಚ್ಚುಮದ್ದು ಬಳಸಬೇಕಾಗಿದೆ ಎಂದು ಅವರು ತಿಳಿಸಿದ್ಧಾರೆ,
ಈ ನಡುವೆ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಪ್ರತಿಕ್ರಿಯಿಸಿ ಆಸ್ಪತ್ರೆಯಲ್ಲಿ ಯಾರು ಚಿಕಿತಸೆ ಪಡೆಯುತ್ತಿದ್ದಾರೆ ಅವರಿಗೆ ಮಾತ್ರ ರೆಮಿಡಿಸಿವಿರ್ ಚುಚ್ಚುಮದ್ದು ಅಥವಾ ಔಷಧಿ ನೀಡಬೇಕು ಅದನ್ನು ಬಿಟ್ಟು ಮನೆಯಲ್ಲಿ ಸಂಗ್ರಹ ಮಾಡಿಕೊಳ್ಳುವುದು ವೈದ್ಯರ ಸಲಹೆ ಇಲ್ಲದೆ ಬಳಸುವುದು ಅಪಾಯಕಾರಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.