ರೆಫ್ರಿಜರೇಟರ್ ಸ್ವಚ್ಛತೆಗಾಗಿ ದಿನಾಚರಣೆ

ಫ್ರಿಡ್ಜ್ ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಕಂಡುಬರುವ ಒಂದು ವಸ್ತು. ಆಹಾರ ಕೆಡದಂತೆ ಹಾಗೂ ಹೆಚ್ಚು ದಿನಗಳ ಕಾಲ ಆಹಾರ ಸಂಗ್ರಹಿಸಲು ಇದನ್ನು ಬಳಕೆ ಮಾಡುವ ನಾವು, ಅದರ ದುರ್ಗಂಧ ತೆಗೆಯಲು ಸಾಕಷ್ಟು ಹೆಣಗಾಡಿರುತ್ತೇವೆ. ಕೆಲವೊಮ್ಮೆ ಕರೆಂಟ್ ಇಲ್ಲಿದಿದ್ದಾಗ ಆಹಾರ ಕೆಟ್ಟು ಫ್ರಿಡ್ಜನಲ್ಲಿ ದುರ್ಗಂಧ ಬೀರುವುದು ಅಥವಾ ನಾವು ಇಡುವ ಕೆಲವೊಂದು ಆಹಾರದಿಂದ ಪ್ರಿಡ್ಜನೊಳಗೆ ವಾಸನೆ ಉಂಟಾಗುವ ಸಾಧ್ಯತೆಯಿವೆ. ಈ ದುರ್ವಾಸನೆಯನ್ನು ತೆಗೆದುಹಾಕುವುದೇ ದೊಡ್ಡ ತಲೆನೋವಿನ ಕೆಲಸ.

ಹಾಗಾಗಿ ನವೆಂಬರ್ 15 ರಂದು ರಾಷ್ಟ್ರೀಯ ನಿಮ್ಮ ರೆಫ್ರಿಜರೇಟರ್ ಸ್ವಚ್ಛಗೊಳಿಸಿ ದಿನವನ್ನಾಗಿ ಆಚರಿಸಲಾಗುವುದು. ನಮ್ಮ ಒತ್ತಡದ ಮತ್ತು ಬಿಡುವಿಲ್ಲದ ಜೀವನಶೈಲಿಯಿಂದಾಗಿ, ರೆಫ್ರಿಜರೇಟರ್ ಅನ್ನು ಶುಚಿಗೊಳಿಸುವುದು ನಿರ್ಲಕ್ಷಿಸಲ್ಪಡುತ್ತದೆ. ಆದ್ದರಿಂದ ರಾಷ್ಟ್ರೀಯ ಕ್ಲೀನ್ ಔಟ್ ಯುವರ್ ರೆಫ್ರಿಜರೇಟರ್ ದಿನವನ್ನು ರಚಿಸಲಾಗಿದೆ. ಹೊಸ ಆಹಾರ ಸಾಮಾಗ್ರಿಗಳು ತಂದು ತುಂಬುತ್ತಿದ್ದಂತೆ, ನಾಳೆ ಆಹಾರ ಪದಾರ್ಥಗಳು ಹಿಂದಕ್ಕೆ ಹೋಗಿ ಮರೆತ್ತುಬಿಡುತ್ತೇವೆ, ಅದನ್ನು ಸ್ವಚ್ಚಗೊಳಿಸದೇ ವಾಸನೆ ಬಂದು ಇಡೀ ರೆಫ್ರಿಜರೇಟರ್ ಗಬ್ಬು ನಾರುವಂತೆ ಮಾಡುತ್ತದೆ. ಅದಕ್ಕಾಗಿ ಈ ದಿನವನ್ನು ಆಚರಿಸಲಾಗುವುದು.

ವರ್ಲ್‌ಪೂಲ್ ಹೋಮ್ ಅಪ್ಲೈಯನ್ಸ್‌ನಲ್ಲಿರುವ ಗೃಹ ಅರ್ಥಶಾಸ್ತ್ರಜ್ಞರು ತಮ್ಮ ರೆಫ್ರಿಜರೇಟರ್‌ಗಳನ್ನು ಸ್ವಚ್ಛಗೊಳಿಸಲು ಜನರನ್ನು ಪ್ರೋತ್ಸಾಹಿಸಲು 1999 ರಲ್ಲಿ ನ್ಯಾಷನಲ್ ಕ್ಲೀನ್ ಔಟ್ ಯುವರ್ ರೆಫ್ರಿಜರೇಟರ್ ದಿನವನ್ನು ರಚಿಸಿದರು. ಆ ಸಮಯದಲ್ಲಿ, ಕಂಪನಿಯು ಟೋಲ್-ಫ್ರೀ ಹಾಟ್‌ಲೈನ್ ಅನ್ನು ಸಹ ಹೊಂದಿತ್ತು, ಅದನ್ನು ಜನರು ಸ್ವಚ್ಛಗೊಳಿಸುವ ಸಲಹೆಗಳಿಗಾಗಿ ಮೀಸಲಿಡಲಾಗಿತ್ತು.

ಫ್ರಿಜ್‌ನಲ್ಲಿರುವ ಐಸ್‌ ಟ್ರೇಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ ಅವುಗಳಲ್ಲಿ ಕೊಳೆ ತುಂಬಿಕೊಂಡು ದುರ್ಗಂಧ ಬೀರುತ್ತವೆ. ಕೊಳೆಯಾಗಿರುವ ಐಸ್‌ ಟ್ರೇಗಳು ವಿವಿಧ ರೋಗಗಳು ಬರಲು ಕಾರಣವಾಗುತ್ತವೆ. ಐಸ್‌ ಟ್ರೇ ತೊಳೆಯಲು ಕೆಲವು ಸುಲಭ ವಿಧಾನಗಳಿವೆ. ಕೊಳೆಯಾಗಿರುವ ಐಸ್‌ ಟ್ರೇಗಳನ್ನು ಹರಿಯುವ ನೀರಿನ ಕೆಳಗೆ ಹಿಡಿದು ಚೆನ್ನಾಗಿ ತೊಳೆಯಿರಿ. ಇದರಿಂದ ಅದರಲ್ಲಿ ಅಂಟಿಕೊಂಡಿರುವ ಐಸ್‌ನ ಕಣಗಳು ಹೋಗುತ್ತವೆ.

ನಿಂಬೆಹಣ್ಣು ಫ್ರಿಡ್ಜನಲ್ಲಿರುವ ದುರ್ವಾಸನೆಯನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ ನೀವು ನಿಂಬೆ ಹಣ್ಣನ್ನು ತುಂಡು ಮಾಡಿ, ಅದರ ಒಂದು ಹೋಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ನಿಮ್ಮ ಫ್ರಿಜರ್ ನೊಳಗೆ ಇರಿಸಿ. ಇದರಿಂದ ಹೊರಬರುವ ಪರಿಮಳ ನಿಮ್ಮ ಫ್ರಿಜ್ನಿಂದ ಬರುವ ವಾಸನೆಯನ್ನು ತೆಗೆದುಹಾಕುತ್ತದೆ ಜೊತೆಗೆ ಫ್ರೆಶ್ ಭಾವನೆಯನ್ನೂ ನಿಮಗೆ ನೀಡುವುದು. ಫ್ರಿಡ್ಜನಲ್ಲಿರುವ ದುರ್ವಾಸನೆಯನ್ನು ತೆಗದುಹಾಕಲು, ಫ್ರಿಡ್ಜರನ್ನು ಅಡುಗೆ ಸೋಡಾದಿಂದ ಸ್ವಚ್ಛಗೊಳಿಸಿ. ಇದರಿಂದ ನಿಮ್ಮ ಫ್ರಿಜರ್ ದುರ್ಗಂಧ ಬೀರುವುದು ಕಡಿಮೆಯಾಗುವುದು. ಫ್ರಿಡ್ಜನ್ನು ಸ್ವಚ್ಛಗೊಳಿಸುವಾಗ ಅಡುಗೆ ಸೋಡಾಕ್ಕೆ ನೀರನ್ನು ಬೆರೆಸಿ, ಮೃದುವಾದ ಬಟ್ಟೆಯನ್ನು ಅದ್ದಿ, ಸ್ವಚ್ಛಮಾಡಿ. ಇದರಿಂದ ದುರ್ವಾಸನೆ ಕಡಿಮೆಯಾಗುವುದು.

ಫ್ರಿಜ್ನಲ್ಲಿ ಹರಡಿರುವ ದುರ್ವಾಸನೆಯನ್ನು ತೆಗೆದುಹಾಕಲು ಕಾಫಿ ಬೀಜಗಳನ್ನು ಸಹ ಬಳಸಬಹುದು. ಇದಕ್ಕಾಗಿ, ಕಾಫಿ ಬೀಜಗಳನ್ನು ಫ್ರಿಜರ್ ನ ವಿವಿಧ ಮೂಲೆಗಳಲ್ಲಿ ಬೇಕಿಂಗ್ ಶೀಟ್‌ನಲ್ಲಿ ಹಾಕಿಟ್ಟು, ರಾತ್ರಿಯಿಡೀ ರೆಫ್ರಿಜರೇಟರ್ ಅನ್ನು ಮುಚ್ಚಿಡಿ. ಇದು ಎಲ್ಲಾ ದುರ್ವಾಸನೆಯನ್ನು ಹೀರಿ, ಫ್ರಿಡ್ಜನ್ನು ಸಹಜ ಸ್ಥಿತಿಗೆ ಮರಳುವಂತೆ ಮಾಡುವುದು.

ಒಂದು ಬಟ್ಟಲು ನೀರಿಗೆ ಉಪ್ಪು ಸೇರಿಸಿ, ಅದನ್ನು ಸ್ವಲ್ಪ ಬಿಸಿ ಮಾಡಿ. ನಂತರ, ಸ್ವಚ್ಛವಾದ ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಫ್ರಿಜ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರಿಂದ ಫ್ರಿಡ್ಜನಲ್ಲಿರುವ ದುರ್ವಾಸನೆ ದೂರವಾಗುವುದು. ಫ್ರಿಜರ್ ನ ವಾಸನೆಯನ್ನು ತೆಗೆದುಹಾಕಲು ನೀವು ಕಿತ್ತಳೆ ಸಿಪ್ಪೆಗಳನ್ನು ಸಹ ಬಳಸಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ, ಕಿತ್ತಳೆ ಸಿಪ್ಪೆಯನ್ನು ರೆಫ್ರಿಜರೇಟರ್ ಒಳಗೆ ಇರಿಸಿ. ವಿನೇಗರ್ ಬಳಸಿ, ನಿಮ್ಮ ರೆಫ್ರಿಜರೇಟರ್ನಲ್ಲಿ ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು. ಇದಕ್ಕಾಗಿ, ಒಂದು ಕಪ್ ನಲ್ಲಿ ವಿನೆಗರ್ ತೆಗೆದುಕೊಂಡು ಫ್ರಿಜ್ ನಲ್ಲಿಡಿ. ಒಂದು ಪಾತ್ರೆಯಲ್ಲಿ ಇದ್ದಿಲು ಹಾಕಿ, ರೆಫ್ರಿಜರೇಟರ್‌ನ ಟೆಂಪರೇಚರ್ ನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಅದರೊಳಗೆ ಇಡಿ, ಮೂರು ದಿನಗಳವರೆಗೆ ಮುಚ್ಚಿಡಿ.