ರೆಪೊ ದರ ಯಥಾಸ್ಥಿತಿ

ನವದೆಹಲಿ.ಏ.೭: ಆರ್ಥಿಕತೆ ಚೇತರಿಕೆಯ ಸೂಚನೆಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ.
ರೆಪೊ ದರವನ್ನು ೪% ರಷ್ಟು ಮುಂದುವರಿಸಲು ನಿರ್ಧರಿಸಿದೆ. ಆರು ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಇದು ೨೦೨೧-೨೨ರ ಆರ್ಥಿಕ ವರ್ಷದ ಮೊದಲ ಎಂಪಿಸಿ ಸಭೆಯಾಗಿದೆ. ರಿಸರ್ವ್ ಬ್ಯಾಂಕ್ ಕೊನೆಯದಾಗಿ ೨೦೨೦ರ ಮೇ ೨೨ರಂದು ನೀತಿ ದರಗಳನ್ನು ಪರಿಷ್ಕರಿಸಿತ್ತು ಎಂದು ತಿಳಿದುಬಂದಿದೆ.
ರೆಪೊ ದರವು ಒಂದು ದೇಶದ ಕೇಂದ್ರ ಬ್ಯಾಂಕ್ (ಭಾರತೀಯ ರಿಸರ್ವ್ ಬ್ಯಾಂಕ್) ಹಣದ ಕೊರತೆಯಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ರೆಪೊ ದರವನ್ನು ಹಣದುಬ್ಬರ ವನ್ನು ನಿಯಂತ್ರಿಸಲು ಹಣಕಾಸು ಪ್ರಾಧಿಕಾರಗಳು ಬಳಸಲ್ಪಡುತ್ತಿದೆ. ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರಿಯ ಬ್ಯಾಂಕುಗಳು ರೆಪೊ ದರವನ್ನು ಹೆಚ್ಚಿಸುತ್ತವೆ, ಏಕೆಂದರೆ ಇದು ಬ್ಯಾಂಕ್ ಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯಲು ಒಂದು ಅಸಹಕಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಂತಿಮವಾಗಿ ಅರ್ಥವ್ಯವಸ್ಥೆಯಲ್ಲಿ ಹಣದ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಣದುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ.
ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು. ಕೇಂದ್ರ ಬ್ಯಾಂಕ್ ರೆಪೋ ದರ ಕಡಿತಗೊಳಿಸಿದಾಗ ಸಹಜವಾಗಿ ಅಧೀನ ಬ್ಯಾಂಕ್‌ಗಳು ಗೃಹ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರಗಳು ಕಡಿಮೆಯಾಗುತ್ತದೆ.