ರೆಡ್ ಕ್ರಾಸ್ ಸಂಸ್ಥೆ : ಸಾಮಾಜಿಕ ಸೇವೆ ಶ್ಲಾಘನೀಯ

ರಾಯಚೂರು.ಸೆ.೨೬- ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಮೊದಲನೆ ಅಲೆ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಿರಂತರವಾಗಿ ಜಿಲ್ಲಾಡಳಿತ ಮತ್ತು ರಾಯಚೂರ್ ಪೋಲಿಸ್ ಇಲಾಕೆಯೊಂದಿಗೆ ಕಾರ್ಯ ನಿರ್ವಹಿಸಿದೆ. ಇಂದು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಇಂತಹ ವಿಷಯಗಳನ್ನು ತಿಳಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ರಸ್ತೆ ಅಪಘಾತ ಆದಾಗ ನೀರಿನಲ್ಲಿ ಬಿದ್ದಾಗ ಬೆಂಕಿ ಅವಘಡ ಆದಾಗ, ಹೃದಯಗಾತ , ಆದಾಗ ಫಿಡ್ಸ್ ಬಂದಾಗ , ಹಾವು ಕಚ್ಚಿದಾಗ ವ್ಯಕ್ತಿಗಳಿಗೆ ಪ್ರಾಥಮಿಕವಾಗಿ ನೀಡುವ ಚಿಕಿತ್ಸೆಯನ್ನು ಪ್ರಥಮ ಚಿಕಿತ್ಸೆಯಾಗಿದ್ದು. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಿಳಿದುಕೊಳ್ಳಬೇಕೆಂದು ದಿನಾಂಕ ೨೫/೦೯/೨೦೨೧ ರಂದು ಎಸ್.ಆರ್.ಕೆ ಬಿ.ಇಡಿ ಸಬಾಂಗಣದಲ್ಲಿ ಜರಿಗಿದ ಭಾರತೀಯ ರೆಡ್ ಕ್ರಾಸ್ ಯುವ ಸಂಸ್ಥೆ ಬೆಂಗಳೂರು ಹಾಗೂ ರಾಯಚೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಪ್ರಥಮ ಚಿಕಿತ್ಸೆ ತರಬೇತಿ ಮತ್ತು ಮಾಹಿತಿ ಕಾರ್ಯಗಾರವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪ್ರಮಾನಂದ ಘೋಡಕೆ ಅವರ ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿಗಳಾಗಿ ಆಗಮಿಸಿದ ಟಾಗೂರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ದರೂರು ಬಸವರಾಜ್ ಪಾಟಿಲ್ ಅವರು ಮಾತನಾಡುತ್ತಾ ಈ ತರಬೇತಿಯನ್ನು ಪ್ರತಿಯೊಬ್ಬರು ಸರಿಯಾಗಿ ತಿಳಿದುಕೊಂಡು ಮುಂದಿನ ತಮ್ಮ ಜೀವನದಲ್ಲಿ ಏನಾದರೂ ಅವಗಡ ಆದ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು, ನಂತರ ಶ್ರೀ ಡಾ. ಅನುರುದ್ ಕುಲಕರ್ಣಿ ಅವರು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಾಕ್ಷಿತ ಮೂಲಕ ಅರ್ಥ ಪೂರ್ಣವಾಗಿ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ವಿಜಯ ಕುಮಾರ್ ಪಾಟೀಲ್ ಶಾವಂತಗೇರಾ ಮಾತಾನಾಡುತ್ತಾ ಕೋರೊನಾ ಸಂದರ್ಭದಲ್ಲಿ ನಿರ್ಗತಿಕ ಕುಟುಂಬದ ಮಹಿಳೆಯರಿಗೆ ಒಲಿಗೆ ಯಂತ್ರವನ್ನು ನೀಡಲಾಗುತ್ತದೆ. ೧೦೦ ವಿದ್ಯಾರ್ಥಿಗಳಿಗೆ ಸಂಸ್ಥೆಯು ಶತಮಾನೋತ್ಸವ ಅಂಗವಾಗಿ ವಿವಿಧ ರೀತಿಯ ಅರ್ಥ ತರಬೇತಿಯನ್ನು ನೀಡಲಾಗುತ್ತದೆ. ನಮ್ಮ ಸಂಸ್ಥೆಯಿಂದ ಎಸ್.ಎಸ್,ಎಲ್.ಸಿ , ಪಿ.ಯು.ಸಿ ಸಂದರ್ಭದಲ್ಲಿ ಉಚಿತವಾಗಿ ಮಾಸ್ಕನ್ನು ನೀಡವದರೊಂದಿಗೆ ಹಲವಾರು ಕೋವಿಡ್ ೧೯ರ ಕಾರ್ಯಕ್ರಮವನ್ನು ನಿರ್ವಹೆ ಮಾಡಿದರು. ಎಮದು ಹೇಳಿದರು. ಶಾವಂತಗೇರಾ ಅವರು ಅರ್ಥ ವಹಿಸಿ ಹೇಳಿದರು.
ವೇದಿಕೆ ಮೇಲೆ ರೆಡ್ ಕ್ರಾಸ್ ಸಂಸ್ಥೆಯು ಉಪಧ್ಯಾಕ್ಷರಾದ ಡಾ. ಶಿವನಂದ ಆಸ್ಪಲ್ಲಿ ಹಾಗೂ ಅತಾವುಲ್ಲಾ ವಕೀರು ಜಿಲ್ಲಾ ಕಾಂiiದರ್ಶಿಗಳು ಮತ್ತು ಎಸ್.ಜಿ.ಕಲ್ಲಯ್ಯ ಟಾಗೂರ್ ಸ್ಮಾರಕ ಶಿಕ್ಷಣ ಸಂಸ್ಥೆಯು ಉಪಸ್ಥಿತರಿದ್ದರು. ಡಾ. ದಂಡಪ್ಪ ಬಿರಾದಾರ ಇವರು ಪ್ರಸ್ತಾವಿಕ ಮಾತನಾಡುತ್ತಾ ಕೋವಿಡ್ ೧೯ರ ಸಂದರ್ಭದಲ್ಲಿ ರೆಡ್ Pಕ್ರಾಸ್ ಸಂಸ್ಥೆ ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಸಭೆಗೆ ಮಾಹಿತಿಯನ್ನು ನೀಡಿದರು.ಶ್ರೀನಿವಾಸ ರಾಯಚುರುಕರ್ ರೆಡ್ ಕ್ರಾಸ್ ಸಂಸ್ಥೆಯ ಡಾ. ರವಿ ಪ್ರಾಧ್ಯಾಪಕರು ಅತವುಲ್ಲಾ ಅವರು ಖಾಸಿಂ ಅಲಿಯವರು ತರಬೇತಿ ನೀಡಿದರು. ಶ್ರೀನಿವಾಸ ರಾಯಚೂರು ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾರಾದ ಪೂಜಾರಿ ಪಾರ್ಥನೆ ಗೀತೆ ಹೇಳಿದರು. ಕಾರ್ಯಕ್ರಮವನ್ನು ನಿರೂಪಿಸಿದರು ಶಾರಾದಾ ಪೂಜಾರಿ ಪ್ರಾರ್ಥನೆ ಗೀತೆ ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಉಮಾ ಪಾಟೀಲ್ ಮೇಡಂ ಅವರು ಮಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿUಯಾದ ಶಿವುಕುಮಾರ ಖಾಸಿಂ ಅಲಿ ಅಮರೇಶ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಕೊನೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.