ರೆಡ್‌ ಕ್ರಾಸ್‌ ಸಂಸ್ಥೆಯಿಂದ ಬಡ ಹೆಣ್ಣು ಮಕ್ಕಳಿಗೆ ಹೈಜಿನ್‌ ಕಿಟ್‌ ವಿತರಣೆ

ಕಲಬುರಗಿ: ಜೂ. 22 : ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯಿಂದ ಗಂಜ ಮಾರು ಕಟ್ಟೆಯ ಕಸಗೂಡಿಸುವರು, ಅಂಗನವಾಡಿ ಸಹಾಯಕರು ಮುಂತಾದ 200 ಬಡ ಹೆಣ್ಣು ಮಕ್ಕಳಿಗೆ ಹೈಜಿನ್‌ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣೆ, ಗೌ. ಕಾರ್ಯದರ್ಶಿ ರವೀಂದ್ರ ಶಾಬಾದಿ, ಉಪ ಸಭಾಪತಿ ಅರುಣಕುಮಾರ ಲೋಯಾ, ಗೌ. ಖಜಾಂಚಿ ಭಾಗ್ಯಲಕ್ಷ್ಮಿ, ವಿಲಾಸಮತಿ ಹಿರೇಮಠ, ಶೀವಲೀಲಾ ಕಡಗಂಚಿ ಮುಂತಾದವರು ಹಾಜರಿದ್ದರು.
ಪ್ರತಿಯೊಂದು ಹೈಜಿನ್‌ ಕಿಟ್ನಲ್ಲಿ ಸಾಬೂನುಗಳು, ಟೂತಪೇಸ್ಟ, ಟೂತಬ್ರಷ್‌, ಕೊಬ್ಬರಿ ಎಣ್ಣೆ, ಸ್ಯಾನಿಟರಿ ಪ್ಯಾಡ ಹೆಣ್ಣು ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ ಅವರಿಗೆ ಬೇಕಾದ ಉಪಯುಕ್ತವಾದ ವಸ್ತುಗಳನ್ನೊಳಗೊಂಡಿದೆ. ಒಟ್ಟು ಸುಮಾರು ಒಂದು ಲಕ್ಷ ರೂಪಾಯಿ. ಮೌಲ್ಯದ ಕಿಟ್‌ಗಳನ್ನು ವಿತರಿಸಲಾಗಿದೆ ಮತ್ತು ತಲಾ ಒಂದು ಕುಟುಂಬಕ್ಕೆ 12 ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗಿದೆ.