ರೆಡ್ ಕ್ರಾಸ್ ಸಂಸ್ಥೆಯಿಂದ 2 ಲಕ್ಷ ಮೌಲ್ಯದ ಉಪಕರಣಗಳ ಕೊಡುಗೆ

ದಾವಣಗೆರೆ, ಜೂ.1;  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಡಾ : ಶಿವಕುಮಾರ್ ಅವರ ಮಾರ್ಗದರ್ಶನ ಮೆರೆಗೆ 2  ಲಕ್ಷ ಮೌಲ್ಯದ  ಆಕ್ಸಿಜನ್ ಮಾಸ್ಕ್ ಗಳು, 2 ವ್ಹೀಲ್ ಚೇರ್, 10000 ಐವರಮೆಕ್ಟಿನ್ ಮಾತ್ರೆಗಳನ್ನು  ಜಿಲ್ಲಾಸ್ಪತ್ರೆಯ ಅಧಿಕ್ಷಕರಾದ, ಡಾ : ಜಯಪ್ರಕಾಶ್ ಅವರಿಗೆ ಹಸ್ತಾಂತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ವೈಸ್ ಛೇರ್ಮನ್ ಗಳಾದ  ಗೌಡ್ರು ಚನ್ನಬಸಪ್ಪ, ಡಿ.ಎಸ್. ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಖಜಾಂಚಿ ಅನಿಲ ಬಾರಂಗಳ್, ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕರುಗಳಾದ ಆನಂದಜ್ಯೋತಿ, ಶಿವಾನಂದ, ವಸಂತರಾಜು, ಕುಮಾರ್,  ಇನಾಯತ್ಉಲ್ಲಾ, ಕೆ.ಕೆ. ನಾಗರಾಜ್, ರವಿಕುಮಾರ್, ಕರಿಬಸಪ್ಪ, ಶ್ರೀಕಾಂತ ಬಗರೆ  ಉಪಸ್ಥಿತರಿದ್ದರು.