ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ

ಸಂಜೆವಾಣಿ ವಾರ್ತೆ

ದಾವಣಗೆರೆ. ನ.೨೬; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಸಹಯೋಗದಲ್ಲಿ  ದಿ. ಶ್ರೀ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಅವರ ಪುಣ್ಯ ಸ್ಮರಣೆ ನಿಮಿತ್ತ ಜಿ. ಎಂ. ವಿಶ್ವವಿದ್ಯಾಲಯದಲ್ಲಿ , ಜಿ. ಎಂ.ಎಸ್ ಅಕಾಡೆಮಿ ಪ್ರಥಮದರ್ಜೆ ಕಾಲೇಜು ಹಾಗೂ ಜಿ. ಎಂ. ಫಾರ್ಮಸಿ ಕಾಲೇಜು ಹಾಗೂ ಜಿ.ಎಂ ಪಾಲಿಟೆಕ್ನಿಕ್ ದಾವಣಗೆರೆ ವತಿಯಿಂದ ರಕ್ತದಾನ ಶಿಬಿರವನ್ನು ಜಿ.ಎಂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಜಿ. ಎಂ.ಎಸ್ ಅಕಾಡೆಮಿ ಪ್ರಥಮದರ್ಜೆ ಕಾಲೇಜು ಕಾಲೇಜಿನ ಪ್ರಾಂಶುಪಾಲರಾದ ಶ್ವೇತಾ ಮರಿಗೌಡರ್ ಹಾಗೂ ಮಂಜುನಾಥ್ ಬಿ, ಹರೀಶ್ ಈ ಆರ್ ಮತ್ತು ಜಿ. ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಗಿರೀಶ್ ಬೊಳಕಟ್ಟಿ, ಮತ್ತು ಜಿ.ಎಂ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಶ್ರೀಧರ್ ಬಿ ಆರ್ ಹಾಗೂ ಇತರ ಉಪನ್ಯಾಸಕರು, ಸಿಬ್ಬಂದಿಗಳು ಇದ್ದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ರಾದ ಗೌಡರ ಚನ್ನಬಸಪ್ಪ, ಕಾರ್ಯದರ್ಶಿಗಳಾದ ಆನಂದ್ ಜ್ಯೋತಿ, ನಿರ್ದೇಶಕರಾದ ಶಿವಾನಂದ್, ವೈದ್ಯಾಧಿಕಾರಿಗಳಾದ ಡಾ. ಪಿ ಕೆ ಬಸವರಾಜ್, ಸಂಯೋಜಕರು ಮತ್ತು ಆಪ್ತಸಮಾಲೋಚಕರಾದ ಶಿವಕುಮಾರ ಎನ್ ಜಿ, ಸಿಬ್ಬಂದಿ ಗಳಾದ ವಿನಾಯಕ, ಗಿರೀಶ್, ಜ್ಯೋತಿ, ಪದ್ಮ, ಸಂತೋಷ್, ನಿರಂಜನ್, ಇತರರು ಹಾಜರಿದ್ದರು.ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಪ್ರಕಾಶ್ ಗಡಿಯಾರ್, ಸಿದ್ದಲಿಂಗ ಸ್ವಾಮಿ, ಹರೀಶ್, ರಾಜೇಶ್, ಲಕ್ಮ ಜೀ, ರಾಘವೇಂದ್ರ, ನವೀನ್, ಲೋಹಿತ್, ಜ್ಯೋತಿ ಇತರರು ಹಾಜರಿದ್ದರು.