ರೆಡ್ ಕ್ರಾಸ್ ನಿಂದ ಕನ್ನಡ ರಾಜ್ಯೋತ್ಸವ

ದಾವಣಗೆರೆ.ನ.೨೭: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ಜಿಲ್ಲಾ ಶಾಖೆಯಿಂದ ಸಂಸ್ಥೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು, ಇದೇ ಸಂದರ್ಭದಲ್ಲಿ ಕೋವಿಡ್ ನಿಂದ ಮೃತ ಪಟ್ಟ ವ್ಯಕ್ತಿಯ ನೊಂದ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ, ದಿನಸಿ ಕಿಟ್ ಗಳ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷರಾದ ದೇವರಮನೆ ಶಿವಕುಮಾರ್ ಅವರು ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಡಾ.ನಂದೀಶ. ಸಿ, ಡಾ. ಸಂದೀಪ್. ವಿ ಇವರುಗಳಿಗೆ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಛೇರ್ಮನರಾದ ಡಾ.ಎ. ಎಮ್. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ವೈಸ್ ಛೇರ್ಮನ್ ರಾದ ಗೌಡ್ರು ಚನ್ನಬಸಪ್ಪ, ಡಿ. ಎಸ್. ಸಿದ್ದಣ್ಣ, ಕಾರ್ಯದರ್ಶಿ ಡಿ.ಎಸ್. ಸಾಗರ್, ಖಜಾಂಚಿಯಾದ ಅನಿಲ್ ಬಾರಂಗಳ, ನಿರ್ದೇಶಕರುಗಳಾದ ಡಾ ಶಿಲ್ಪಶ್ರೀ, ಇನಾಯತ್ಉಲ್ಲಾ, ಆನಂದಜ್ಯೋತಿ,  ಧನಂಜಯ ಮೂರ್ತಿ, ನರೇಂದ್ರ ಪ್ರಕಾಶ, ಶ್ರೀಕಾಂತ ಬಗರೆ, ರವಿಕುಮಾರ್, ಮೋಹನ್ ಕುಮಾರ್, ಆಸಿಯಾ ಬಾನು, ಮಧುಕೇಶ್ವರ, ಜಗನ,  ನಾಗರಾಜ್.ಕೆ.ಕೆ, ಕರಿಬಸಪ್ಪ್, ರವೀಂದ್ರನಾಥ, ಶಿವಕುಮಾರ್. ಎನ್. ಜಿ, ಪೂಜಾ, ವಿನಾಯಕ, ಗಿರೀಶ್, ಜ್ಯೋತಿ, ಉಪಸ್ಥಿತರಿದ್ದರು.