ರೆಡ್‌ ಅಲರ್ಟ್ ಹಿನ್ನೆಲೆ, ನಾಳೆ‌ ಜಿಲ್ಲೆಯಾದ್ಯಂತ ಶಾಲೆ,‌ಅಂಗನವಾಡಿಗೆ ರಜೆ

ಕಲಬುರಗಿ,ಜು.25: ರೆಡ್‌ ಅಲರ್ಟ್ ಹಿನ್ನೆಲೆ, ನಾಳೆ‌(ಜು.26) ಜಿಲ್ಲೆಯಾದ್ಯಂತ ಶಾಲೆ,‌ಅಂಗನವಾಡಿಗೆ ರಜೆ ಘೋಷಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ .
ಕಳೆದ ೫-೬ ದಿನಗಳಿಂದ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು,ಜು.೨೬ ರಂದು ರೆಡ್ ಅಲರ್ಟ್ ನ್ನು ಹವಾಮಾನ ಇಲಾಖೆ ಘೋಷಿಸಿದ್ದರಿಂದ ರಜೆ ಘೋಷಿಸಲಾಗಿದೆ.