ರೆಡ್‍ಕ್ರಾಸ್ ಜಿಲ್ಲಾ ಶಾಖೆಗೆ ಪ್ರಶಸ್ತಿ


ಚಿತ್ರದುರ್ಗ, ಡಿ.೧; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆ ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ವತಿಯಿಂದ ಅಧ್ಯಕ್ಷರಾದ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರು  ರೆಡ್‍ಕ್ರಾಸ್‍ನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.ರೆಡ್‍ಕ್ರಾಸ್ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಗಾಯತ್ರಿ ಶಿವರಾಮ್, ಜಿಲ್ಲಾ ಕಾರ್ಯದರ್ಶಿ ಮಜಹರ್ ಉಲ್ಲಾ, ಖಜಾಂಚಿ ಅರುಣ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ರಾಜ್ಯ ಉಪಾಧ್ಯಕ್ಷರಾದ ನಿವೃತ ಐಎಎಸ್ ಅಧಿಕಾರಿ ಗೋಪಾಲ ಹೊಸೂರ್, ರಾಜ್ಯ ಸಭಾಪತಿ ನಾಗಣ್ಣ, ಉಪಸಭಾಪತಿ ಡಾ.ವಿ.ಎಲ್‍ಎಸ್ ಕುಮಾರ್, ಖಜಾಂಚಿ ಆನಂದ ಜಿಗಜಿನ್ನಿ, ಪ್ರಧಾನ ಕಾರ್ಯದರ್ಶಿ ಬಾಲಸುಬ್ರಮಣ್ಯ ಮತ್ತು ವಿಜಯ್ ಉಪಸ್ಥಿತರಿದ್ದರು