ರೆಡ್‍ಕ್ರಾಸ್‍ನ ಸೌಲಭ್ಯಗಳನ್ನು ಪಡೆದು ಉತ್ತಮ ಜೀವನ ನಡೆಸಿ

ಚಿತ್ರದುರ್ಗ,ಸೆ.25; ಕೋವಿಡ್ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಅತ್ಯುತ್ತಮ ಕೆಲಸ ನಿರ್ವಹಿಸಿದ್ದು ಸಂಸ್ಥೆ ಜನಸಾಮಾನ್ಯರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಿ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಧನಂಜಯ ಹೇಳಿದರು.
  ನಗರದ ರೋಟರಿ ಕ್ಲಬ್‍ನ ಕೆ. ವೀರಭದ್ರಪ್ಪ, ಬಿ.ಕೆ. ರಾಜಶೇಖರಪ್ಪ ಸಭಾಂಗಣದಲ್ಲಿ  ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಆಯೋಜಿಸಿದ್ದ ಅಡುಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯಿಂದ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸೇವೆಗಳನ್ನು ಮಾಡುತ್ತ ಬಂದಿದೆ. ವಿಶೇಷವಾಗಿ  ಕೋವಿಡ್-19 ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ರಾಜ್ಯಾದ್ಯಂತ ಸಾಕಷ್ಟು ಜನರಿಗೆ ಸಹಾಯ ಹಸ್ತವನ್ನು ಮಾಡಿದೆ ನೀಡಿದೆ. ಲಾಕ್‍ಡೌನ್ ಸಂದರ್ಭದಲ್ಲಿ  ಜನರಿಗೆ ಆಹಾರ ಸಾಮಗ್ರಿ ಹಾಗೂ ಮೆಡಿಕಲ್ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದರು.
ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಕೆಲವರು  ಕೋವಿಡ್‍ಗೆ ಹೆದರಿಕೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗಾಗೀ ಯಾರು ಸಹ ನಿರ್ಲಕ್ಷ್ಯೆ ಮಾಡದೇ ಸೂಕ್ತ ಸಮಯಕ್ಕೆ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬೇಕು ಎಂದರು.ಕೋವಿಡ್ ಸಮಯದಲ್ಲಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದರು, ಕೆಲವರು ಮನೆಯಲ್ಲಿಯೇ ಮರಣ ಹೊಂದಿದ್ದರು. ಕೆಲವರು ತಮ್ಮ ತಂದೆ ತಾಯಿಯನ್ನು ಸಹ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದರೆ. ಇಂತವರಿಗೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ಸೌಲಭ್ಯ ನೀಡಿದೆ ಎಂದರು,.
ರೋಟರಿ ಕ್ಲಬ್‍ನ ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ್ ಪಟೇಲ್ ಮಾತನಾಡಿ, ಯಾವುದೇ ಕಾಯಿಲೆ ಬಂದಾಗ ಉದಾಸೀನ ಮಾಡಬೇಡಿ, ತಕ್ಷಣ ಚಿಕಿತ್ಸೆ ಪಡೆದು ಆರೋಗ್ಯವಂತರಾಗಬೇಕು. ಜೀವನದಲ್ಲಿ ಧೈರ್ಯ ಇದ್ದಾರೆ ಏನು ಬೇಕಾದರೂ ಸಹ ಸಾಧಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಅರುಣ್‍ಕುಮಾರ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಆಡಳಿತ ಮಂಡಳಿ ಸದಸ್ಯೆ ಗಾಯತ್ರಿ ಶಿವರಾಂ, ಗಾಂಧಿವಾದಿ ಹೆಚ್.ಎಸ್.ಕೆ. ಡಾ; ಸ್ವಾಮಿ, ವೈದ್ಯ ಡಾ. ನಾರಾಯಣ ರೆಡ್ಡಿ, ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಶಿವರಾಮ್, ರೆಡ್‍ಕ್ರಾಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀನಿವಾಸ್,  ರೋಟರಿ ಶಾಲೆಯ ಅಧ್ಯಾಪಕ  ಭಾಷ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.