ರೆಡ್‌ಕ್ರಾಸ್ ಕಾರ್ಯಕ್ರಮ ಜಾರಿ ಅಧಿಕಾರಿಯಾಗಿ ಡಾ.ಶರಣಪ್ಪ

ಕೋಲಾರ,ಮಾ.೨೦ : ಭಾರತೀಯ ರೆಡ್‌ಕ್ರಾಸ್ ಕೋಲಾರ ಜಿಲ್ಲಾ ಶಾಖೆಯ ಜಿಲ್ಲಾ ಕಾರ್ಯಕ್ರಮ ಜಾರಿ ಅಧಿಕಾರಿಯಾಗಿ ಕವಿ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ.ಶರಣಪ್ಪ ಗಬ್ಬೂರ್ ನೇಮಕಗೊಂಡಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಕಿರಿಯ ರೆಡ್ ಕ್ರಾಸ್ ವಿಭಾಗದ ಪರಿಪೋಷಣಂ ಯೋಜನೆಯಡಿಯಲ್ಲಿ ಕೋಲಾರ
ಜಿಲ್ಲಾ ರೆಡ್ ಕ್ರಾಸ್ ಶಾಖೆಯಿಂದ ಡಾ.ಶರಣಪ್ಪ ಗಬ್ಬೂರ್, ಕಾರ್ಯಕ್ರಮ ಜಾರಿ ಅಧಿಕಾರಿಯಾಗಿ ರಾಜ್ಯ ಶಾಖೆಯಿಂದ ನಾಮನಿರ್ದೇಶನಗೊಂಡಿರುವ ಇವರಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿರವರು ಆದೇಶ ಪತ್ರ ನೀಡಿ ಅಭಿನಂದಿಸಿದರು.
ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಪ್ರೌಢಶಾಲೆಗಳಲ್ಲಿ ತಕ್ಷಣದಿಂದ ಜ್ಯೂನಿಯರ್ ರೆಡ್‌ಕ್ರಾಸ್ ಘಟಕಗಳನ್ನು ಆರಂಭಿಸಿ ವಿದ್ಯಾರ್ಥಿಗಳಲ್ಲಿ ತರಬೇತಿ ಸಂವಹನ ಮತ್ತು ರೆಡ್‌ಕ್ರಾಸ್ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಛೇರ್ಮನ್ ಎನ್.ಗೋಪಾಲಕೃಷ್ಣಗೌಡ, ಡೆಪ್ಯೂಟಿ ಚೇರ್ಮನ್ ಆರ್.ಶ್ರೀನಿವಾಸನ್,
ಕೋಶಾಧ್ಯಕ್ಷ ಜಿ. ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.