ರೆಡ್ಡಿ ಸಮಾಜ ಬಂಧುಗಳು ಭಾಗವಹಿಸಲು ಅನಿಲ್ ಕುಮಾರ ಕರೆ

ಶ್ರೀಶೈಲಾ : ಲಕ್ಷ ದೀಪೋತ್ಸವ ಕಾರ್ಯಕ್ರಮ
ಸಿರವಾರ.ನ,೮- ಶ್ರೀ ಹೇಮರೆಡ್ಡಿ ಮಲ್ಲಮ್ಮ ರಾಜ್ಯ ಯುವ ಜಾಗೃತಿ ವೇದಿಕೆ ವತಿಯಿಂದ ಶ್ರೀ ಕ್ಷೇತ್ರ ಶ್ರೀಶೈಲಂ ದಲ್ಲಿ ಮಹಾಸಾಧ್ವಿ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ೧೧ನೇ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ರೆಡ್ಡಿ ಸಮಾಜದ ಬಂಧುಗಳು ಅದಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಾಜ್ಯ ಯುವ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ತೆಗ್ಗಿನಮನೆಯವರು ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ಅವರನ್ನು ಪ.ಪಂ ಸದಸ್ಯರಾದ ವೈ ಬೂಪ್ಪನಗೌಡ ಹಾಗೂ ಸಿರವಾರ ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಜೆ ದೇವರಾಜ್ ಗೌಡ ಇವರಿಂದ ಅನಿಲ್ ಕುಮಾರ್ ತೆಗ್ಗಿನಾಳ ಇವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಹೇಶ್ ಆದಿಮನಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಮಂಜುನಾಥ್ ಗುಡ್ಡನಾಳ, ಸಿರವಾರ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್ ಚಾಗಬಾವಿ, ಪ.ಪಂ ಸದಸ್ಯ ಸಂದೀಪ ಗೌಡ, ಪ್ರಕಾಶ್ ಪಾಟೀಲ್, ನಾಗರಾಜ್ ಗೌಡ, ವೆಂಕಟರೆಡ್ಡಿ ಬಾಲ್ಕಲ್, ಶಿವರಾಮ ರೆಡ್ಡಿ, ಹಾಗೂ ತಾಲೂಕಿನ ಸಮಾಜ ಬಾಂಧವರು ಹಿರಿಯರು ಹಿರಿಯರು ಯುವಕರು ಭಾಗವಹಿಸಿದ್ದರು.