ರೆಡ್ಡಿ ಸಮಾಜಕ್ಕೆ ಮೇಯರ್ ಸ್ಥಾನ ನೀಡಿ

ಕಾಳಗಿ: ನ.19:ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ರೆಡ್ಡಿ ಸಮಾಜದವರನ್ನು ನೇಮಿಸಬೆಕೆಂದು ರೆಡ್ಡಿ ಸಮಾಜ ಯುವ ಘಟಕದ ವತಿಯಿಂದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ಕಾಮರೆಡ್ಡಿಯವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೆಳಿಕೆ ನೀಡಿರುವ ಅವರು ಸಧ್ಯ ಕಲಬುರಗಿಯಲ್ಲಿ ರೆಡ್ಡಿ ಸಮುದಾಯಕ್ಕೆ ಮೇಯರ್ ಅಥವಾ ಉಪಮೇಯರ್ ಪಟ್ಟ ನೀಡುವುದರಿಮದ ಸಾಮಾಜಿಕ ನ್ಯಾಯದೊಂದಿಗೆ ಅಭಿವೃಧ್ದಿಗೆ ಪೂರಕವಾಗಿ ಕೆಲಸ ಮಾಡಲು ಉತ್ತೇಜ ನೀಡಲು ಸಾಧ್ಯವಾಗುತ್ತದೆ ಹಾಗಾಗಿ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ರೆಡ್ಡಿ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.