ರೆಡ್ಡಿ ಯೂತ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ

ಬಳ್ಳಾರಿ, ನ.7: ನಗರದ ವೀರಶೈವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ರೆಡ್ಡಿ ಯೂತ್ ಕ್ರಿಕೆಟ್ ಟೂರ್ನಮೆಂಟ್ ಗೆ ನಿನ್ನೆ ಸಂಜೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ರಾಯಚೂರು ಕೊಪ್ಪಳ ಹಾಲು ಒಕ್ಕೂಟ ನಿರ್ದೇಶಕ ಜಿ.ವೀರಶೇಖರ್ ರೆಡ್ಡಿ, ಪ್ರವೀಣ್ ರೆಡ್ಡಿ, ಎಪಿಎಂಸಿ ಸದಸ್ಯ ಜಿ.ಸಿ. ಕೃಷ್ಣಾರೆಡ್ಡಿ ಪ್ರಮುಖ ಮುಖಂಡರುಗಳಾದ ಕೊಳಗಲ್ ಪ್ರಸಾದ ರೆಡ್ಡಿ ರೆಡ್ಡಿ ಕುಲಬಾಂಧವರು ಉಪಸ್ಥಿತರಿದ್ದರು.