ರೆಡ್ಡಿ ಬಳ್ಳಾರಿಗೆ ಬರುವ ಅರ್ಜಿ ಸುಪ್ರೀಕೋರ್ಟಿನಲ್ಲಿ ಮುಂದಕ್ಕೆ

ಬಳ್ಳಾರಿ:ನ.17 ಕಳೆದ ಒಂಭತ್ತು ವರ್ಷಗಳಿಂದ ಬಳ್ಳಾರಿಯಿಂದ ದೂರ ಇರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಲು ಇರುವ ಸುಪ್ರೀಂ ಕೋರ್ಟಿನಲ್ಲಿನ ತಡೆಯನ್ನು ತೆರವುಗೊಳಿಸಬೇಕೆಂಬ ಅರ್ಜಿ ವಿಚಾರಣೆ ಮತ್ತೆ ಒಂದು ತಿಂಗಳು ಮುಂದಕ್ಕೆ ಹೋಗಿದೆ.
ಅಕ್ರಮ ಗಣಿಗಾರಿಕೆ, ಅಕ್ರಮ ಸಂಪಾದನೆ ಮೊದಲಾದ ಪ್ರಕರಣಗಳಲ್ಲಿ ಸಿಬಿಐನಿಂದ ಕಳೆದ 2011 ರ ಸೆ.5 ರಂದು ಬಂಧಿತರಾಗಿ. ಸಧ್ಯ ಜಾಮೀನಿನ‌ ಮೇಲೆ ಬಿಡುಗಡೆಯಾಗಿ‌ ಬೆಂಗಳೂರಿನಲ್ಲಿ ವಾಸವಾಗಿರು ಗಾಲಿ‌ ಜನಾರ್ದನ ರೆಡ್ಡಿ ಅವರು ಸಾಕ್ಷಗಳ ನಾಶ ಮಾಡುತ್ತಾರೆಂದು ಬಳ್ಳಾರಿ, ಮತ್ತು ಆಂದ್ರಪ್ರದೇಶದ ಅನಂತಪುರಂ,ಕರ್ನೂಲು ಜಿಲ್ಲೆಗಳ ಪ್ರವೇಶವನ್ನು ಸುಪ್ರೀಂ ಕೋರ್ಟ್ ನಿಷೇಧ ಮಾಡಿದೆ.
ಮಗಳ ಮದುವೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ನ್ಯಾಯಾಲಯದ ಅನುಮತಿ‌ ಪಡೆದು ಬಳ್ಳಾರಿಗೆ ಬಂದಿರುವ ರೆಡ್ಡಿ ಅವರು ತಮಗೆ ವಿಧಿಸಿರುವ ನಿಷೇಧವನ್ನು ತೆಗೆದು ಹಾಕುವಂತೆ ಅರ್ಜಿ ಸಲ್ಲಿಸಿದ್ದರು.
ಇದನ್ನು ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ ನಿಷೇಧ ತೆರವುಗೊಳಿಸಲು ನಿಮ್ಮದೇನಾದರೂ ಆಕ್ಷೇಪಣೆ, ಇಲ್ವೇ ಅಫಿಡೆವಿಟ್ ಸಲ್ಲಿಸುವುದಿದ್ದರೆ ಸಲ್ಲಿಸಿ ಎಂದು ಸಿಬಿಐ ಪರ ವಕೀಲರಿಗೆ ಸೂಚಿಸಿ ಅರ್ಜಿಯ ವಿಚಾರಣೆಯನ್ನು ಒಂದು ತಿಂಗಳ‌ಕಾಲ ಮುಂದಕ್ಕೆ ಹಾಕಿದೆಯಂತೆ.