ರೆಡ್‍ಕ್ರಾಸ್ ಸಂಸ್ಥೆ ಕಟ್ಟಡಕ್ಕೆ 5 ಲಕ್ಷ ರೂ. ಅನುದಾನ:ನಡಹಳ್ಳಿ

ತಾಳಿಕೋಟೆ:ಸೆ.4: ಪಟ್ಟಣದಲ್ಲಿ ಭಾರತೀಯ ರೇಡ್‍ಕ್ರಾಸ್ ಸಂಸ್ಥೆಯ ವತಿಯಿಂದ ರಕ್ತ ಸಂಗ್ರಹಣ ಕೇಂದ್ರ ಸ್ಥಾಪನೆಗಾಗಿ ತಾಳಿಕೋಟೆ ಪಟ್ಟಣದಲ್ಲಿ ನಿರ್ಮಾಗೊಳ್ಳುತ್ತಿರುವ ಕಟ್ಟಡದ ಕಾರ್ಯಕ್ಕೆ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ತಮ್ಮ ಅನುದಾನದಲ್ಲಿ 5 ಲಕ್ಷ ರೂ. ಸಹಾಯಧನ ಸಲ್ಲಿಸುವದಾಗಿ ಬರವಸೆ ನೀಡಿದರು.

ಶನಿವಾರರಂದು ಸ್ಥಳೀಯ ವಿರಕ್ತೇಶ್ವರ ತರುಣ ಸಂಘ ಹಾಗೂ ಭಾರತೀಯ ರೇಡ್ ಕ್ರಾಸ್ ಸಂಸ್ಥೆ ತಾಳಿಕೋಟೆ, ಬಿಎಲ್‍ಡಿಇ ಸಂಸ್ಥೆ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಗಜಾನನ ಉತ್ಸವ ಅಂಗವಾಗಿ ಏರ್ಪಡಿಸಲಾದ ರಕ್ತದಾನ ಶಿಬಿರಕ್ಕೆ ಬೆಟ್ಟಿ ನೀಡಿ ರಕ್ತದಾನ ಮಾಡುತ್ತಿರುವ ಯುವಕರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ತೆರಳುತ್ತಿದ್ದ ಶಾಸಕ ನಡಹಳ್ಳಿ ಅವರಿಗೆ ಹಿರಿಯ ಪತ್ರಕರ್ತರು ರೇಡ್‍ಕ್ರಾಸ್ ಸಂಸ್ಥೆಯ ಸದಸ್ಯರಾದ ಜಿ.ಟಿ.ಘೋರ್ಪಡೆ ಅವರು ರೇಡ್ ಕ್ರಾಸ್ ಸಂಸ್ಥೆಯ ರಕ್ತ ಸಂಗ್ರಹಾಲಯ ಘಟಕ ಸ್ಥಾಪನೆ ಕುರಿತು ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾರ್ಯ ಸ್ಥಗಿತಗೊಂಡಿದ್ದರ ಕುರಿತು ಗಮನ ಸೇಳೆದಾಗ ಶಾಸಕರು ಕೂಡಲೇ ಸದರಿ ವಿಷಯಕ್ಕೆ ಸಂಬಂದಿಸಿ ತಮ್ಮ ಶಾಸಕರ ಅನುದಾನದಿಂದ ಕಟ್ಟಡದ ಕಾರ್ಯಕ್ಕೆ 5 ಲಕ್ಷ ರೂ. ನೀಡುವದಾಗಿ ಬರವಸೆ ನೀಡಿದರು.

ರಕ್ತದಾನ ಶಿಬಿರ ಉದ್ಘಾಟಿಸಿದ ಬಿ.ಎಲ್.ಡಿ.ಇ ಸಂಸ್ಥೆಯ ರಕ್ತ ಬಂಡಾರದ ಅಧಿಕಾರಿ ಡಾ.ರುಚೀರ ಉತ್ತಮ(ಪಿಜಿ) ಅವರು ಮಾತನಾಡಿ ರಕ್ತದಾನ ಮಾಡುವದು ಶ್ರೇಷ್ಠದಾನ ವಾಗಿದೆ ರಕ್ತದಾನ ಮಾಡುವದರಿಂದ ಶರೀರಕ್ಕೆ ಯಾವುದೇ ತರಹದ ಹಾನಿ ಇರುವದಿಲ್ಲಾವೆಂದರು. ರಕ್ತದಾನ ಮಾಡುವವರು 18 ರಿಂದ 60 ವರ್ಷದ ಒಳಗಿನವರು ಇರಬೇಕು ಆರೋಗ್ಯ ವಂತರು ರಕ್ತದಾನ ಮಾಡಬೇಕು ಪುರುಷರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ಹೆಣ್ಣು ಮಕ್ಕಳು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ರಕ್ತದಾನ ಮಾಡುವದರಿಂದ ಶರೀರದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಲಿದೆ ರಕ್ತದಾನ ಮಾಡಿದ ನಂತರ ಬೌನಮ್ಯಾರೋದಲ್ಲಿ ಪುನರ್ ರಕ್ತ ಉತ್ಪತ್ತಿಯಾಗುವುದೆಂದರು. ಸಂಗ್ರಹಿಸಿದ ರಕ್ತವನ್ನು ಹರಡುವಂತಹ ರೋಗವನ್ನು ಪರಿಕ್ಷೀಸಲಾಗುತ್ತದೆ ರೋಗದಲ್ಲಿ ಏಡ್ಸ್, ಹಳದಿ ಕಾಮಣಿ, ಬಿಳಿ ಕಾಮಣಿ ಮತ್ತು ಮಲೇರಿಯಾ, ಗುಪ್ತರೋಗ, ಇವುಗಳನ್ನು ಪರಿಕ್ಷೀಸಲಾಗುತ್ತದೆ ಎಂದರು. ಕಾರಣ ಯುವಕರು ರಕ್ತದಾನ ಮಾಡಿ ಅನ್ಯರ ಜೀವ ಉಳಿಸುವ ಹೀರೋ ಆಗಬೇಕೆಂದು ಹೇಳಿದ ಡಾ.ರುಚೀರ ಅವರು ರಕ್ತವನ್ನು ದಾನ ಮಾಡುವವರು ಶುಗರ್, ಬೀಪಿ, ಹೃದಯ ರೋಗಸ್ಥರು, ಖಾಯಂ ಗುಳಿಗೆ ಸೇವನೆ ಮಾಡುವಂತವರು ರಕ್ತದಾನ ಮಾಡಬಾರದೆಂದ ಅವರು ಈಗಾಗಲೇ ಬಿ.ಎಲ್.ಡಿ.ಗೆ ಬರತಕ್ಕಂತ 40 ಕ್ಕೂ ತಲಸ್ಮೀಯಾ ರೋಗ ಹೊಂದಿದ ಮಕ್ಕಳಿಗೆ ಪ್ರತಿ ತಿಂಗಳು ಉಚಿತವಾಗಿ ರಕ್ತವನ್ನು ಹಾಕಲಾಗುತ್ತಾ ಸಾಗಲಾಗಿದೆ ಎಂದರು.

ಇನ್ನೋರ್ವ ಭಾರತೀಯ ರೇಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ವೀರಭದ್ರಪ್ಪ ಸಜ್ಜನ ಅವರು ಮಾತನಾಡಿ ತಾಳಿಕೋಟೆ ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ಭಾರತೀಯ ರೇಡ್ ಕ್ರಾಸ್ ಸಂಸ್ಥೆಯ ತಾಳಿಕೋಟೆಯ ಶಾಖೆಯ ವತಿಯಿಂದ ಅನೇಕ ಶಿಬಿರಗಳನ್ನು ಏರ್ಪಡಿಸುತ್ತಾ ಸಾಗಿಬರಲಾಗಿದೆ ರಕ್ತದಾನ ಶಿಬಿರ, ನೇತ್ರ ತಪಾಸಣೆ ಶಿಬಿರ, ಆರೋಗ್ಯ ತಪಾಸಣೆಗಳಂತವುಗಳು ಮಾಡಲಾಗಿದ್ದು ಈ ಕುರಿತು ನಾಗರಿಕರು ಹಾಗೂ ಸಂಸ್ಥೆಯ ಸದಸ್ಯರು ಬೆಂಬಲಿಸುತ್ತಾ ಸಾಗಿ ಬಂದಿದ್ದಾರೆಂದರು. ಈಗಾಗಲೇ ಜಿಲ್ಲಾಧಿಕಾರಿಯವರಿಂದ ತಾಳಿಕೋಟೆಯಲ್ಲಿ ರೇಡ್ ಕ್ರಾಸ್ ಸಂಸ್ಥೆಗೆ ಜಾಗೆ ನೀಡಲಾಗಿದ್ದು ಆ ಸದರಿ ಜಾಗೆಯಲ್ಲಿ ಕಟ್ಟಡ ಪ್ರಾರಂಬಿಸಿ ಅಲ್ಲಿ ರಕ್ತ ಬಂಡಾರ ಸಂಗ್ರಹ ಕೇಂದ್ರವನ್ನು ಸ್ಥಾಪಿಸಬೇಕೆಂದು ನಿರ್ಧರಿಸಲಾಗಿದೆ ಈ ಕುರಿತು ಸರ್ಕಾರದ ಸಹಾಯ ಹಸ್ತ ಅಗತ್ಯವಾಗಿದೆ ಎಂದರು.

ಬಿಎಲ್‍ಡಿಇ ರಕ್ತ ಬಂಡಾರದ ಸಿಬ್ಬಂದಿಗಳಾದ ಅಶೋಕ ಕಬ್ಬಿನ, ದೀಪಕ ಸಾವಂತ, ಶ್ರೀಶೈಲ ಕುಂಭಾರ, ಈಶ್ವರ ಕೋರಿ, ಅವರು ರಕ್ತ ಸಂಗ್ರಹ ಕಾರ್ಯದಲ್ಲಿ ತೊಡಗಿ 30 ಜನರಿಂದ ರಕ್ತ ಸಂಗ್ರಹಿಸಿಕೊಂಡರು.

ಮುಖಂಡರಾದ ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ, ಶಿವಶಂಕರ ಹಿರೇಮಠ, ಶ್ರೀ ವಿರಕ್ತೇಶ್ವರ ತರುಣ ಸಂಘದ ಅಧ್ಯಕ್ಷ ರಾಹುಲ್ ಸಜ್ಜನ, ಹಂಪಣ್ಣ ರಂಗನಪೇಟೆ, ಅಕ್ಷಯ ಸಜ್ಜನ, ಪ್ರಶಾಂತ ಸಜ್ಜನ, ಸಂತೋಷ ಮುರಾಳ, ಚೆಂದಪ್ಪ ಅಗಸರ, ಪ್ರಕಾಶ ಸಜ್ಜನ, ಮಂಜುನಾಥ ನಿಂಗದಳ್ಳಿ, ಶೇಖಪ್ಪ ಪಟ್ಟಣಶೆಟ್ಟಿ, ಶೇಖಪ್ಪ ವಿಜಯಪೂರ, ಸೌರಭ ಬಿಳೇಭಾವಿ, ಪ್ರದೀಪ ಸಜ್ಜನ, ಚೇತನ ಸಜ್ಜನ, ಶಶಿ ರಂಗನಪೇಟ, ಹಾಗೂ ರೇಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಸಿ.ವ್ಹಿ.ಚೊಂಡಿಪಾಟೀಲ, ಕಾರ್ಯದರ್ಶಿ ರಾಘು ಚವ್ಹಾಣ, ಸದಸ್ಯರಾದ ಜಿ.ಟಿ.ಘೋರ್ಪಡೆ, ಮೊದಲಾದವರು ಉಪಸ್ಥಿತರಿದ್ದರು.