ರೆಡ್‍ಕ್ರಾಸ್ ತರಬೇತಿ ಶಿಬಿರದಲ್ಲಿ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.28: ಮೂರು ದಿನಗಳ ಕಾಲ ಕಲಬುರಗಿಯ ಶ್ರೀ ಗುರು ವಿದ್ಯಾಪೀಠದಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವಿಭಾಗೀಯ ಮಟ್ಟದ ತರಬೇತಿ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅದರಲ್ಲಿ ಬಳ್ಳಾರಿಯ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಮೊಹಮ್ಮದ್ ಆಸಿಮ್, ವಿನಯ್ ಕುಮಾರ್, ವಿನೋದ್ ಕುಮಾರ್ ಬಹುಮುಖ ಸಾಮಥ್ರ್ಯದಿಂದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನಗೈದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು  ಪಡೆದಿದ್ದಾರೆ. ಮತ್ತು ಹಯಾತ್ ಅಲಿ ಚಿತ್ರಕಲಾ ಸ್ಪರ್ಧಯಲ್ಲಿ ಎರಡನೇ ಸ್ಥಾನವನ್ನು ಗಳಿಸಿ ಅಭಿನಂದನೆಗೆ ಪಾತ್ರರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಜ್ಯೂನಿಯರ್ ರೆಡ್‍ಕ್ರಾಸ್ ಸಂಯೋಜಕ ಅಬ್ದುಲ್ ಜಲೀಲ್ ಕೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.