ರೆಡಿಯೋ ಆಲ್ಟಿಮೀಟರ್ ಅಳವಡಿಕೆ ವಿವಾದ: ವಿಮಾನ ಹಾರಾಟ ವಿಳಂಬ

ವಾಷಿಂಗ್ಟನ್,ಜೂ.29- ಐದನೇ ತಲೆಮಾರಿನ ತರಾಂಗತರ ಕಾರ್ಯಗತಗೊಳಿಸುವ ಗಡುವು ಹತ್ತಿರವಾಗುತ್ತಿದ್ದಂತೆ, 5-ಜಿ ರೇಡಿಯೋ ಆಲ್ಟಿಮೀಟರ್ ಅವಳವಡಿಸಿಕೊಳ್ಳದ ವಿಮಾನಗಳ ಹಾರಾಟ ಅಮೇರಿಕಾದಲ್ಲಿ ಸ್ಥಗಿತ ಅಥವಾ ಸಂಚಾರ ವಿಳಂಬವಾಗುವ ಸಾಧ್ಯತೆಗಳಿವೆ.

ಸಂಭಾವ್ಯ 5ಜಿ-ಸಿ ಬ್ಯಾಂಡ್ ಹಸ್ತಕ್ಷೇಪ ಪರಿಹರಿಸಲು ನವೀಕರಿಸಲಾದ ರೇಡಿಯೊ ಆಲ್ಟಿಮೀಟರ್‍ಗಳಿಲ್ಲದ ವಿಮಾನಗಳು ಜುಲೈ 1 ರಿಂದ ಸಂಚಾರದಲ್ಲಿ ವಿಳಂಬ ಇಲ್ಲವೆ ಸಂಚಾರ ರದ್ದು ಎದುರಿಸಬೇಕಾಗುತ್ತದೆ ಎಂದು ಅಮೇರಿಕಾದ ಸಾರಿಗೆ ವಿಭಾಗ ಕಾರ್ಯದರ್ಶಿ ಪೀಟ್ ಬುಟ್ಟಿಗೀಗ್ ಎಚ್ಚರಿಕೆ ನೀಡಿದ್ದಾರೆ.

ವಿಮಾನ ಸಂಚಾರದ “ವಿಳಂಬ ಅಥವಾ ರದ್ದತಿಗಳ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ ಬೇಸಿಗೆಯಲ್ಲಿ ಕಾರ್ಯಕ್ಷಮತೆಂ ಮೇಲೆ ಪರಿಣಾಮ ಬೀರುವ ಬಹು ದೊಡ್ಡ ಸಮಸ್ಯೆ ಎಂದು ಅವರು ಹೇಳಿದ್ದಾರೆ.

ವಿಮಾನಗಳು ಮತ್ತು ನೆಲದ ನಡುವಿನ ಅಂತರವನ್ನು ಅಳೆಯಲು ರೇಡಿಯೊ ತರಂಗಗಳನ್ನು ಅವಲಂಬಿಸಿರುವ ಸಾಧನಗಳನ್ನು ಕೆಲವು 5ಜಿ ಸಂಕೇತಗಳು ಗೊಂದಲಗೊಳಿಸಬಹುದು ಎಂದು ವಾಯುಯಾನ ಸುರಕ್ಷತಾ ಅಧಿಕಾರಿಗಳು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ವಿಮಾನ ಇಳಿಯಲು ಅನುಕೂಲ ಮಾಡಿಕೊಡುವ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ವಿಮಾನಯಾನ ಸಂಸ್ಥೆಗಳು ಸದ್ಯದ ಗೊಂದಲ ಪರಿಹರಿಸುವಂತೆ ಒತ್ತಾಯಿಸಿವೆ.

ವೈರ್‍ಲೆಸ್ ಪೂರೈಕೆದಾರರು ತಮ್ಮ ಗ್ರಾಹಕರಿಗೆ ಹೊಸ ಸಿಗ್ನಲ್‍ಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದರೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‍ನಿಂದ ನಿರೀಕ್ಷಿತ ನಿರ್ಬಂಧಗಳನ್ನು ಏರಬಹುದು ಎನ್ನುವ ಆತಂಕ ವಿಮಾನಯಾನ ಸಂಸ್ಥೆಗಳದ್ದಾಗಿದೆ.

ಕೆಲವು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ರದ್ದುಗೊಳಿಸುವ ಸಮಸ್ಯೆ ಎದುರಾಗಿತ್ತು. ವಿಮಾನದ ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳಡಿಸಿಕೊಳ್ಳಲು ಮುಂದಾಗಿದೆ.

ಈ ಹಿಂದೆ ಉಪಗ್ರಹ ಟಿವಿಗೆ ಬಳಸಲಾಗಿದ್ದ ಫ್ರೀಕ್ವೆನ್ಸಿ ಬ್ಯಾಂಡ್ ಅನ್ನು ಬಳಸುವಾಗ ಅಮೇರಿಕಾದ ಎರಡು ಸರ್ಕಾರಿ ಏಜೆನ್ಸಿಗಳ ನಡುವೆ ತೀವ್ರ ವಿರೋಧ ಎದುರಾಗಿತ್ತು ಎಂದು ಹೇಳಲಾಗಿದೆ.